ಬೆಂಗಳೂರು –
ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ – ಗುರುವಾರ ಒಂದು ದಿನ ವಿಶೇಷ ಸಾಂದರ್ಭಿಕ ರಜೆ ಮಂಜೂರು ಹೌದು ಜನೆವರಿ 4 ರಂದು ಬ್ರೈಲ್ ದಿನಾಚರಣೆ ಹಿನ್ನಲೆಯಲ್ಲಿ ದೃಷ್ಟಿ ದೋಷವುಳ್ಳ ಸರ್ಕಾರಿ ನೌಕರರಿಗೆ ರಜೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಪ್ರತಿ ವರ್ಷ ಜನವರಿ 4 ರಂದು ನಡೆಯುವ ವಿಶ್ವ ಬ್ರೈಲ್ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ದೃಷ್ಟಿ ದೋಷವುಳ್ಳ ವಿಕಲ ಚೇತನ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯ ಸೌಲಭ್ಯವನ್ನು ಒದಗಿಸುವಂತೆ ನ್ಯಾಷನಲ್ ಫೆಡರೇಶನ್ ಆಫ್ ಡಿಮ ಬ್ಲೈಂಡ್ ಬೆಂಗಳೂರಿನ ಪ್ರಧಾನ ಕಾರ್ಯ ದರ್ಶಿಗಳು ಕೋರಿದ್ದರು.ಈ ಒಂದು ಕೋರಿಕೆಗೆ ರಾಜ್ಯ ಸರ್ಕಾರವು ಕೂಡಾ ಸ್ಪಂದಿಸಿ ದಿನಾಂಕ 4-01-2024 ರಂದು ದಿವಂಗತ ಲೂಯಿ ಬ್ರೈಲ್ ರವರ ಜನ್ಮ ದಿನದ ಅಂಗವಾಗಿ ಅಂಧ ಸರ್ಕಾರಿ ನೌಕರರಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿ ಸಲಾಗಿದೆ.
ಈ ಒಂದು ಕುರಿತಂತೆ ನಿರ್ದೇಶಕರು ವಿಕಲ ಚೇತನರ ಮತ್ತು ಹಿರಿಯ ನಾಗರೀಕರ ಇಲಾಖೆ ಯವರು ಕೋರಿದ್ದಾರೆ.ಪ್ರಸ್ತಾವನೆಯಲ್ಲಿ ವಿವರಿಸಿ ರುವ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ 4-01-24 ರಂದು ಲೂಯಿ ಬ್ರೈಲ್ ರವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ವಿಶ್ವ ಬ್ರೈಲ್ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ
ದೃಷ್ಟಿ ವಿಕಲ ಚೇತನ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸಿ ಸದರಿ ಕಾರ್ಯಕ್ರಮದಲ್ಲಿ ಭಾಗವಹಿ ಸುವ ನೌಕರರು ಹಾಜರಾತಿ ಪ್ರಮಾಣ ಪತ್ರವನ್ನು ಒದಗಿಸುವ ಹಾಗೂ ಈ ವಿಶೇಷ ರಜೆ ದಿನಕ್ಕೆ ಸರ್ಕಾರದಿಂದ ಯಾವುದೇ ದಿನ ಭತ್ಯೆ ಅಥವಾ ಪ್ರಯಾಣ ಭತ್ಯೆಯನ್ನು ಕ್ಲೈಮ್ ಪರಿಗಣಿಸಲಾಗು ವುದಿಲ್ಲ ಷರತ್ತಿಗೊಳಪಟ್ಟು 4-01-24 ರಂದು ರಜೆ ಮಂಜೂರು ಮಾಡಿ ಆದೇಶಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..