ಬೆಂಗಳೂರು –
ಜನೆವರಿ 6 ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.ಅಕ್ಷರ ಜಾತ್ರೆಗಾಗಿ ಈಗಾಗಲೇ ಹಾವೇರಿ ಸಂಪೂರ್ಣವಾಗಿ ಸಿದ್ದಗೊಂಡಿದ್ದು ಇನ್ನೂ ಈ ಒಂದು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಜ್ಯದ ಸರ್ಕಾರಿ ನೌಕರರಿಗೆ ವಿಶೇಷ ಸಾಂದ ರ್ಭಿಕ ರಜೆಯನ್ನು ನೀಡಲಾಗಿದೆ.
ಜನವರಿ 6,7 ಮತ್ತು 8 ರಂದು ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾಲಕ್ಕಿ ನಗರಿ ಹಾವೇರಿ ಸಿದ್ಧವಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಷರತ್ತು ಬದ್ಧ ವಿಶೇಷ ಸಾಂದ ರ್ಭಿಕ ರಜೆ ನೀಡಲಾಗಿದೆ.ಕನ್ನಡ ಸಾಹಿತ್ಯ ಸಮ್ಮೇ ಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಸಂಖ್ಯೆ 100ಕ್ಕೆ ಮೀರದಂತೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವನ್ನು ನೀಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕಾರ್ಯ ದರ್ಶಿಗಳ ಪತ್ರದ ಅನ್ವಯ ಪ್ರತಿ ವರ್ಷವೂ ಈ ರಜೆಯನ್ನು ನೀಡಲಾಗಿದೆ 11-2-1986ರ ಸರ್ಕಾರಿ ಆದೇಶ ಸಂಖ್ಯೆ ಅನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯ ಸೌಲಭ್ಯವನ್ನು ಮಂಜೂರು ಮಾಡುವಂತೆ ಕೋರಿದ್ದರು.
ಕನ್ನಡ ಆಡಳಿತ ಭಾಷೆಯಾಗಿರುವ ಈ ಸಂದರ್ಭ ದಲ್ಲಿ ಕನ್ನಡ ಸಾಹಿತ್ಯದ ಜ್ಞಾನದ ಅಭಿರುಚಿ ಮತ್ತು ಆಸಕ್ತಿಯುಳ್ಳ ನೌಕರರು ಈ ಸಮ್ಮೇಳನದಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಅನುಕೂಲ ವಾಗುವಂತೆ ಈಗಿರುವ 100 ಮಿತಿಯನ್ನು ತೆಗೆದು ಹೆಚ್ಚಿನ ಸರ್ಕಾರಿ ನೌಕರರಿಗೆ ಸಾಹಿತ್ಯ ಸಮ್ಮೇಳನ ದಲ್ಲಿ ಭಾಗವಹಿಸಲು ರಜೆಯ ಸೌಲಭ್ಯವನ್ನು ವಿಸ್ತರಿಸಲು ಕೋರಲಾಗಿತ್ತು.
ಸರ್ಕಾರವು ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಅನುಮತಿಯನ್ನು ನೀಡಿತ್ತು.ಆದೇಶದಲ್ಲಿ ಕೆಲವೊಂದು ಆಕಸ್ಮಿಕ ತಪ್ಪುಗಳಿದ್ದು ಅದರಿಂದಾಗಿ ಮರುಪರಿಶೀಲಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರಕಾರಿ ನೌಕರರಿಗೆ ಈ ಕೆಳಗಿನ ಷರತ್ತುಗಳಿಗೊಳಪಟ್ಟು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸರ್ಕಾರವು ಆದೇಶ ನೀಡಿದೆ.
ವಿಶೇಷ ಸಾಂದರ್ಭಿಕ ರಜೆಗಾಗಿ ಷರತ್ತುಗಳು
ವಿಶೇಷ ಸಾಂದರ್ಭಿಕ ರಜೆಯು, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನೌಕರರು ಅವರ ಆಸಕ್ತಿಯ ಒಂದು ಅಥವಾ ಎರಡು ದಿನಗಳ ಅವಧಿಗೆ ಮತ್ತು ಹೋಗಿಬರುವ ಪ್ರಯಾಣಕ್ಕೆ ಬೇಕಾಗುವ ಅವಧಿಗೆ ಸೀಮಿತ ವಾಗಿರಬೇಕು.
ಕನ್ನಡ ಸಾಹಿತ್ಯದ ಜ್ಞಾನ ಮತ್ತು ಅಭಿರುಚಿ ಇದ್ದು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಮಂತ್ರಿಸಲ್ಪಟ್ಟ ಸರ್ಕಾರಿ ನೌಕರರಿಗೆ ಈ ರಜೆಯ ಸೌಲಭ್ಯ ನೀಡುವುದು.ಕನ್ನಡ ಸಾಹಿತ್ಯದ ಅಭಿರುಚಿಯುಳ್ಳ ನೌಕರರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾ ಗಿದ್ದರೆ ಅವರಿಗೂ ಈ ಸೌಲಭ್ಯ ನೀಡುವುದು.
ಯಾವುದೇ ವಿಶೇಷ ಗುರುತರ ಸರ್ಕಾರಿ ಕೆಲಸದ ಮೇಲೆ ನೇಮಿಸಲ್ಪಟ್ಟ ನೌಕರರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ಕೊಡಬಾರದು.
ಈ ಸಮ್ಮೇಳನ ಮುಗಿದ ಮೇಲೆ ಸಮ್ಮೇಳನದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರಿಗೆ ಸಾಹಿತ್ಯ ಪರಿಷತ್ತಿನವರು ಅಧಿಕೃತ ಹಾಜರಿಪತ್ರ ಕೊಡ ಬೇಕು.ಈ ಆಧಾರದ ಮೇಲೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಅಧಿಕಾರ ವುಳ್ಳ ಅಧಿಕಾರಿಗಳು ಈ ರಜೆಯನ್ನು ಮಂಜೂರು ಮಾಡುವುದು
ಹಾಗೂ ಈ ರಜೆ ಪಡೆಯಲಿಚ್ಛಿಸುವ ನೌಕರರು ರಜೆ ಮಂಜೂರು ಮಾಡುವ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯತಕ್ಕದ್ದು.ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಈ ಆದೇಶವನ್ನು ಸರ್ಕಾರದ ಉಪ ಕಾರ್ಯದರ್ಶಿ ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು)ಚಿಕ್ಕಬಸವಯ್ಯ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..