ಬೆಂಗಳೂರು –
ಶಿಕ್ಷಕರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ ಅಧಿಕೃತವಾಗಿ ಆದೇಶವಾಯಿತು ಸಾಂದರ್ಭಿಕ ರಜೆ…..ಶಿಕ್ಷಕರಿಗೆ ರಜೆ ಯಾತಕ್ಕಾಗಿ ಗೊತ್ತಾ ಒಮ್ಮೆ ನೋಡಿ…..ಹೌದು
ಫೆಬ್ರುವರಿ 16 ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಮತಕ್ಷೇತ್ರದ ಚುನಾವ ಣೆಯ ಹಿನ್ನಲೆಯಲ್ಲಿ ಶಿಕ್ಷಕ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಣೆ ಮಾಡ ಲಾಗಿದೆ.ಹೌದು ಶಿಕ್ಷಕರ ಕ್ಷೇತ್ರಕ್ಕೆನಡೆಯಲಿರುವ ಉಪಚುನಾವಣೆ ಪ್ರಯುಕ್ತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಶಿಕ್ಷಕ ಮತ ದಾರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಿ ಸಲಾಗಿದೆ
ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾ ರಿಗಳು ಮತ್ತು ಬಿಬಿಎಂಪಿ ಮುಖ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಅರ್ಹ ಶಿಕ್ಷಕ ಮತ ದಾರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ಹಾಗೂ ರಾಮನಗರ ಜಿಲ್ಲೆಗೆ ಶುಕ್ರ ವಾರ ಫೆಬ್ರವರಿ 16ರಂದು ಉಪ ಚುನಾವಣೆ ನಡೆಯಲಿದೆ.ಅಂದು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಶಿಕ್ಷಕ ಮತದಾರರಿಗೆ ಈ ರಜೆ ಅನ್ವಯವಾಗಲಿದೆ.
ಬೆಂಗಳೂರು ಶಿಕ್ಷಕರ ಕ್ಷೇತದ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಶಿಕ್ಷಕ ಮತದಾರರು,ಮತದಾನ ಮಾಡಲು ಅನು ಕೂಲವಾಗುವಂತೆ ನಿರ್ಧಾರ ಕೈಗೊಳ್ಳಲಿದೆ
ಫೆಬ್ರವರಿ 16ರಂದು ವಿಶೇಷ ಸಾಂದರ್ಭಿಕ ರಜೆ ಪಡೆಯಲು ಅರ್ಹರು ಎಂದು ಅಧಿಸೂಚನೆ ಮುಖಾಂತರ ಆದೇಶಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..