ಬೆಂಗಳೂರು –
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿರುದ್ಧ ಸಿಡಿದೆ ದ್ದಿದ್ದಾರೆ. ಹೌದು ಈವರೆಗೆ ಶಿಕ್ಷಕರ ಯಾವುದೇ ಸಮ ಸ್ಯೆಗೆ ನೋವಿಗೆ ಕಷ್ಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಅಲ್ಲದೇ ವಾರ್ಷಿಕ ವಾಗಿ ಕೊಡುತ್ತಿದ್ದ ಎರಡೂ ನೂರು ಸದಸ್ಯತ್ವ ಹಣ ವನ್ನು ಇನ್ನೂ ಮುಂದೆ ಕೊಡದಿರಲು ನಿರ್ಧಾರವನ್ನು ಮಾಡಿದ್ದಾರೆ.
ಸಧ್ಯ 13 ಸಾವಿರ ಸದಸ್ಯರನ್ನು ಹೊಂದಿರುವ ಈ ಒಂದು ಕರ್ನಾಟಕ ರಾಜ್ಯ (6- 8) ಪದವೀಧರರ ಪ್ರಾಥಮಿಕ ಶಿಕ್ಷಕರ ಸಂಘ ಬೆಂಗಳೂರು ಇವರು ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೋಡಲ್ ಅಧಿಕಾರಿ ಗೆ ಪತ್ರವನ್ನು ಬರೆದು ವಾರ್ಷಿಕ ಸದಸ್ಯತ್ವ ಹಣವನ್ನು ಕಟಾವಣೆ ಮಾಡದಂತೆ ಹೇಳಿದ್ದಾರೆ ಈ ಒಂದು ಪತ್ರ ಸುದ್ದಿ ಸಂತೆ ನ್ಯೂಸ್ ಗೆ ಲಭ್ಯವಾಗಿದೆ
ಹೌದು ಈ ಒಂದು ವಿಚಾರ ಕುರಿತು ಈವರೆಗೆ ಪ್ರತಿ ವರ್ಷ ಆ ಒಂದು ಸಂಘಕ್ಕೆ ವಾರ್ಷಿಕವಾಗಿ ಕೊಡು ತ್ತಿದ್ದ ಮತ್ತು ತಪ್ಪದೇ ತನ್ನಿಂದ ತಾನೇ ಶಿಕ್ಷಕರ ಖಾತೆ ಯಿಂದ ಈ ಒಂದು ಹಣ ಆ ಒಂದು ಶಿಕ್ಷಕರ ಸಂಘ ಕ್ಕೆ ಜಮಾ ಆಗುತ್ತಿತ್ತು. ಆದರೆ ಈವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಯಾವುದೇ ಸಮಸ್ಯೆಗೆ ಅವರು ಸ್ಪಂದಿಸದ ಹಿನ್ನೆಲೆಯಲ್ಲಿ ಮತ್ತು ಸಮಸ್ಯೆಗಳು ಪರಿ ಹಾರ ವಾಗದ ಹಿನ್ನಲೆಯಲ್ಲಿ ಈ ಒಂದು ನಿರ್ಧಾರಕ್ಕೆ ಶಿಕ್ಷಕರು ಬಂದಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕ್ಕೆ ವಾರ್ಷಿಕ ಎರಡು ನೂರು ರೂಪಾಯಿ ಸದಸ್ಯತ್ವ ವನ್ನು ಕೊಡುತ್ತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರು ಇನ್ನೂ ಮುಂದೆ ಆ ಸಂಘಕ್ಕೆ ಸದಸ್ಯತ್ವವನ್ನು ಕೊಡು ವುದನ್ನು ನಿಲ್ಲಿಸಲು ಮುಂದಾಗಿದ್ದಾರೆ. ಕಾರಣ ಆ ಸಂಘವು ಇತ್ತೀಚೆಗೆ ಹತ್ತು ವರ್ಷಗಳಿಂದ ಶಿಕ್ಷಕರ ಯಾವುದೇ ಸಮಸ್ಯೆಗೆ ಸ್ಪಂದಿಸಿರುವುದಿಲ್ಲ ಆದ್ದರಿಂ ದ ಆ ಸಂಘದ ಅವಶ್ಯಕತೆ ಇಲ್ಲ ಅನ್ನುವ ತೀರ್ಮಾನ ಕ್ಕೆ ಬಂದಿದ್ದಾರೆ, ಸರಕಾರಕ್ಕೆ ಅವರು ಕೊಟ್ಟ ಪತ್ರದ ವಿವರಣೆ ನೀಡಿದ್ದಾರೆ ಹೀಗಾಗಿ ಆ ಒಂದು ಸಂಘಕ್ಕೆ ದೊಡ್ಡ ಹೊಡೆತ ಮತ್ತು ಸದಸ್ಯರ ಪ್ರಮಾಣ ಕಡಿಮೆ ಯಾದಂತಾಗಿದ್ದು ಮುಂದೆ ಏನಾಗುತ್ತದೆ ಎಂಬುದ ನ್ನು ಕಾದು ನೋಡಬೇಕು