ನವದೆಹಲಿ –
ಭಾರತದ ಮಾಜಿ ವೇಗಿ ಸುದೀಪ್ ತ್ಯಾಗಿ ವಿದಾಯ ಎಲ್ಲಾ ಮಾದರೀಗಳ ಕ್ರಿಕೇಟ್ ಗೆ ವಿದಾಯವನ್ನು ಘೋಷಣೆ ಮಾಡಿದ್ದಾರೆ.ಸುದೀಪ್ ತ್ಯಾಗಿ ಭಾರತ ಕ್ರಿಕೇಟ್ ತಂಡದಲ್ಲಿ ವೇಗದ ಬೌಲರ್ ಆಗಿದ್ದು ಸಧ್ಯ ಮಾಜಿಯಾಗಿದ್ದರು.ಹಲವು ವರುಷಗಳಿಂದ ಕ್ರಿಕೇಟ್ ಕ್ಷೇತ್ರದಲ್ಲಿ ಆಡುತ್ತಿದ್ದ ಸುದೀಪ್ ತ್ಯಾಗಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

33 ವರ್ಷದ ತ್ಯಾಗಿ ನಾಲ್ಕು ಏಕದಿನ ಮತ್ತು ಒಂದು ಟಿ-20 ಪಂದ್ಯ ಆಡಿದ್ದಾರೆ. ಇದಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 14 ಪಂದ್ಯಗಳನ್ನು ಆಡಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ತ್ಯಾಗಿ 41 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 109 ವಿಕೆಟ್ ಪಡೆದರು. ಇದಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅವರು 23 ಪಂದ್ಯಗಳಲ್ಲಿ 31 ವಿಕೆಟ್ ಪಡೆದಿದ್ದಾರೆ. ತ್ಯಾಗಿ 23 ಟಿ-20 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ.

2009 ರ ಐಪಿಎಲ್‌ನ ಆವೃತ್ತಿಯ ನಂತರ ಟಿ-20 ಯಲ್ಲಿ ಶ್ರೀಲಂಕಾ ವಿರುದ್ಧ ಪಾದಾರ್ಪಣೆ ಮಾಡಿದರು. ಎರಡು ವಾರಗಳ ನಂತರ ಅವರು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು.

ಇಷ್ಟೇಲ್ಲ ಸಾಧನೆ ಮಾಡಿದ ವೇಗದ ಬೌಲರ್ ತ್ಯಾಗಿ ಈಗ ನಿವೃತ್ತಿ ಘೋಷಣೆ ಮಾಡಿದ್ದು ಅವರ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.