ಕಲಬುರ್ಗಿ –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬೆನ್ನಲ್ಲೇ ಈಗ ಮತ್ತೊಂದು ಸಿಡಿ ಪ್ರಕರಣ ಬಯಲಿಗೆ ಬಂದಿದೆ ಹೌದು ಆ ಸಿಡಿ ಪ್ರಕರಣ ಬೆನ್ನಲ್ಲೇ ಈಗ ಇತ್ತ ಮತ್ತೊಂದು ಅದೇ ದಾರಿಯಲ್ಲಿಯೇ ಪ್ರಕರಣ ನಡೆದಿದ್ದು ಈಗ ಬೆಳಕಿಗೆ ಬಂದಿದೆ.
ಹೌದು ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಯ ಅಶ್ಲೀಲ ವಿಡಿಯೋ ಹರಿಬಿಟ್ಟಿರೋ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.ಮಹಿಳೆಗೆ ಬೆತ್ತಲಾಗಿ ವಿಡಿಯೋ ಮಾಡಿ ಹಾಕಿದ್ರೆ ಪರ್ಮಿನೆಂಟ್ ಜಾಬ್ ಕೊಡಿಸ್ತಿನಿ ಅಂತ ಹೇಳಿದ ವಿವಿ ಗ್ರಂಥಾಲಯ ಅಧಿಕ್ಷಕ ಶರಣಪ್ಪ ಮಾಕುಂಡಿ.
ಬೆತ್ತಲೆ ವಿಡಿಯೋ ಶೂಟ್ ಮಾಡಿ ಮೊಬೈಲ್ ಹಾಕಿದ್ರೆ ಪರ್ಮನೆಂಟ್ ಜಾಬ್ ನೀಡುವ ಆಮಿಷ ನೀಡಿದ್ದಾನೆ. ವಿವಿ ಉದ್ಯೋಗಿಯ ಮಾತಿಗೆ ಮರುಳಾಗಿ ತನ್ನದೇ ಬೆತ್ತಲೆ ವಿಡಿಯೋ ಶೂಟ್ ಮಾಡಿ ಮಹಿಳೆ ಆತನಿಗೆ ಹಾಕಿದ್ದಾಳೆ.
ವಿಡಿಯೋ ನೋಡಿ ಸುಮ್ಮನಾಗುವ ಬದಲು ಅದನ್ನು ಬೇರೆ ಗ್ರೂಪಗೆ ಶೇರ್ ಮಾಡಿದ್ದಾನೆ. ಈಗ ವಿಡಿಯೊ ವಿವಿ ಯ ಎಲ್ಲಾ ಗ್ರೂಪ್ ನಲ್ಲಿ ಹರಿದಾಡ್ತಿರೊದು ಗಮನಕ್ಕೆ ಬಂದ ಕೂಡಲೇ ಮಹಿಳೆ ನಂಬಿಸಿ ಮೋಸ ಮಾಡಿದ್ದಾನೆ ಅಂತ ವಿವಿ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 292, 407, 420, 354 (ಎ) ಅಡಿ ಶರಣಪ್ಪ ಮಾಕುಂಡಿ ವಿರುದ್ಧ ದೂರು ದಾಖಲಾಗಿದೆ