ಬೆಂಗಳೂರು –
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸರಕಾರಿ ಶಾಲೆಗಳ ಶಿಕ್ಷಕರಿಗೆ ಈಗ ಮರು ಹೊಂದಾಣಿಕೆಯ ಆತಂಕ ಆರಂಭ ವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ಶಿಕ್ಷಕರ ಹುದ್ದೆಗಳ ಮರು ಹೊಂದಾಣಿಕೆಗೆ ಮುಂದಾ ಗಿದ್ದು.ಈ ಸಂಬಂಧ ಆದೇಶ ಹೊರಡಿಸಿದೆ.ಎಪ್ರಿಲ್ ಅಂತ್ಯ ದೊಳಗೆ ಪ್ರಕ್ರಿಯೆ ಆರಂಭವಾಗಲಿದೆ.ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಅಥವಾ ಶೂನ್ಯಕ್ಕೆ ಇಳಿದಿರುವ ಸರಕಾರಿ ಶಾಲೆಗಳ ಪಟ್ಟಿ ಇಲಾಖೆಯಲ್ಲಿ ಸಿದ್ಧವಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು ಶಿಕ್ಷಕರ ಸಂಖ್ಯೆ ಹೆಚ್ಚಿದ್ದರೆ ಈವರೆಗೆ ಅಂತಹ ಶಾಲೆಯ ಶಿಕ್ಷಕರನ್ನು ನಿಯೋ ಜನೆ ಮೇಲೆ ಬೇರೆಡೆಗೆ ಕಳುಹಿಸಲಾಗುತ್ತಿತ್ತು.ಈಗ ಹುದ್ದೆ ಯನ್ನೇ ಕಡಿಮೆ ಮಾಡಲು ಅಥವಾ ಅಗತ್ಯವಿರುವ ಶಾಲೆಗೆ ವರ್ಗಾಯಿಸಲು ಇಲಾಖೆ ಕ್ರಮ ಕೈಗೊಂಡಿದೆ.ಇದರಿಂದ ಶಿಕ್ಷಕರಿಗೆ ಸಮಸ್ಯೆಯಾದರೆ ಮಕ್ಕಳ ಕೊರತೆ ಎದುರಿಸುತ್ತಿ ರುವ ಶಾಲೆಗಳನ್ನು ಸುಲಭ ವಾಗಿ ಮುಚ್ಚಲು ಸರಕಾರಕ್ಕೆ ಅನುಕೂಲವಾಗಲಿದೆ.


ಶಾಲೆಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ವಿಷಯ ಶಿಕ್ಷಕರು,ಭಾಷಾ ಶಿಕ್ಷಕರು,ಮುಖ್ಯ ಶಿಕ್ಷಕರು,ಚಿತ್ರಕಲಾ, ಸಂಗೀತ ಶಿಕ್ಷಕರು,ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯ ಮರು ಹೊಂದಾಣಿಕೆಗೆ ಪ್ರತ್ಯೇಕ ಮಾನದಂಡ ರೂಪಿಸಲಾಗಿದೆ. ಮೊದಲಿಗೆ ವಲಯ,ತಾಲೂಕು,ಜಿಲ್ಲೆ,ವಿಭಾಗೀಯ ಹಂತ ದಲ್ಲಿ ಮರು ಹೊಂದಾಣಿಕೆ ಆಗಲಿದೆ.ಅದರಂತೆ ತಾಲೂಕಿ ನಲ್ಲಿ ಹುದ್ದೆ ಖಾಲಿಯಿದ್ದು ಶಾಲೆ ಲಭ್ಯವಿಲ್ಲದಿದ್ದರೆ ಜಿಲ್ಲೆಗೆ ವರ್ಗಾಯಿಸಲಾಗುತ್ತದೆ.


ಜಿಲ್ಲೆಯಲ್ಲಿ ಶಾಲೆ ಲಭ್ಯವಿಲ್ಲದಿದ್ದರೆ ವಿಭಾಗಕ್ಕೆ ಹಂಚಿಕೆ ಮಾಡಲಾಗುತ್ತದೆ.ಅಂದರೆ ಶಿಕ್ಷಕ ಹುದ್ದೆ ಸಹಿತ ಒಂದು ತಾಲೂಕಿನಿಂದ ಇನ್ನೊಂದು ತಾಲೂಕು,ಜಿಲ್ಲೆ ಅಥವಾ ವಿಭಾಗಕ್ಕೆಹೋಗಬೇಕಾಗುತ್ತದೆ.ತಾಲೂಕು ಹಂತದಿಂದ ಪ್ರಕ್ರಿಯೆ ಆರಂಭ ವಾಲಿದೆ.ಹುದ್ದೆಗಳ ಮರುಹೊಂದಾಣಿಕೆ ಯಿಂದ ವರ್ಗಾವಣೆ ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ವರ್ಗಾ ವಣೆಗೆ ಮುನ್ನ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ಗುರುತಿ ಸುವ ಪ್ರಕ್ರಿಯೆ ಇರುತ್ತದೆ.ಮರುಹೊಂದಾಣಿಕೆಯಿಂದಾಗಿ ಖಾಲಿ ಹುದ್ದೆಗಳು ಹೆಚ್ಚಲಿವೆ.ಇದರಿಂದ ವರ್ಗಾವಣೆ ವೇಳೆ ಶಿಕ್ಷಕರಿಗೆ ಹೆಚ್ಚು ಅನುಕೂಲವಾಗುತ್ತದೆ.


ಶಿಕ್ಷಕರಿಗೆ ಆತಂಕ…..
ಇಲಾಖೆಯ ಈ ಕ್ರಮದಿಂದ ಹಲವು ಶಿಕ್ಷಕರಲ್ಲಿ ಆತಂಕ ಮೂಡಿದೆ.ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಾಲೆಯನ್ನು ಹುದ್ದೆ ಸಮೇತ ತ್ಯಜಿಸಬೇಕಾಗುತ್ತದೆ. ವರ್ಗಾ ವಣೆ ಪ್ರಕ್ರಿಯೆಗೂ ಇದಕ್ಕೂ ಸಂಬಂಧ ಇಲ್ಲ. ಅನಿವಾರ್ಯ ವಾಗಿ ಬೇರೆ ಕಡೆಗೆ ಹೋಗಬೇಕಾದೀತು ಎಂಬ ಆತಂಕ ಶಿಕ್ಷಕರದ್ದಾಗಿದೆ.ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗ ಳನ್ನು ಮುಚ್ಚಲು ಸಾಧ್ಯವಿಲ್ಲ.ಹುದ್ದೆಯ ಮರು ಹೊಂದಾ ಣಿಕೆ ಮಾಡಿದಾಗ ಮಕ್ಕಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಬ ಹುದು.ಹೊಸ ಹುದ್ದೆಯ ಸೃಷ್ಟಿಗೆ ಆರ್ಥಿಕ ಇಲಾಖೆಯ ಅನುಮತಿ ಬೇಕಾ ಗುತ್ತದೆಯಾದರೂ ಅದನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದರ ಸ್ಪಷ್ಟತೆಯಿಲ್ಲ ಎಂದು ಶಿಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.