ಬೆಂಗಳೂರು –
ದೇಶದೆಲ್ಲೆಡೆ ಸಧ್ಯ ಕೊರೊನಾ 2 ನೇ ಅಲೆ ಇದರೊಂ ದಿಗೆ ಬ್ಲಾಕ್ ಫಂಗಸ್ ಅಬ್ಬರದ ಹಿನ್ನೆಲೆಯಲ್ಲಿ ರಾಜ್ಯ ದ ಎಲ್ಲಾ ಶಾಲೆಗಳನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ನೀಡಿದ್ದು ಇದರ ಬೆನ್ನ ಲ್ಲೇ ಈಗ ಇದೀಗ ಏಕಾಏಕಿಯಾಗಿ ಇಲಾಖೆ ಮತ್ತೊಂ ದು ಆದೇಶವನ್ನು ಮಾಡಿದೆ.ಹೌದು ಸಾಲು ಸಾಲಾಗಿ ಎರಡು ದಿನದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನ ವನ್ನು ಅಪ್ಡೇಟ್ ಮಾಡುವಂತೆ ಸೂಚನೆ ನೀಡಿ ಗೊಂದಲದ ವಾತಾವರಣವನ್ನು ಶಿಕ್ಷಣ ಇಲಾಖೆ ಈಗ ನಿರ್ಮಾಣ ಮಾಡಿದೆ.

ಹೌದು ಶಾಲೆ ಬಂದ್ ಇರುವ ಕಾರಣ ಶಿಕ್ಷಕರು ಶಾಲೆ ಗಳಿಗೆ ಭೇಟಿ ನೀಡಲಾಗುತ್ತಿಲ್ಲ.ಪರಿಸ್ಥಿತಿ ಹೀಗಿದ್ದರೂ ವಿದ್ಯಾರ್ಥಿಗಳ ಮೌಲ್ಯಾಂಕನ ಅಪ್ಡೇಟ್ ಮಾಡಲು ಎರಡು ದಿನ ಕಾಲಾವಕಾಶ ಕೊಟ್ಟು ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ.

ರಾಜ್ಯದಲ್ಲಿ ಪರೀಕ್ಷೆ ಇಲ್ಲದೇ 1 ರಿಂದ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಸರ್ಕಾರ ಆದೇಶಿಸಿದೆ.ಆನ್‌ಲೈನ್ ಮತ್ತು ವಿದ್ಯಾ ಗಮ ಅಡಿ ಕಲಿತ ಮಕ್ಕಳಿಗೆ ಈಗಾಗಲೇ ನಡೆಸಿರುವ ಪರೀಕ್ಷೆಗಳನ್ನು ಆಧರಿಸಿ ಅಂಕ ನೀಡಿ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಸೂಚಿಸಿತ್ತು.

ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ. 24 ರ ವರೆಗೆ ಲಾಕ್ ಡೌನ್ ನಿಯ ಮ ಜಾರಿಗೊಳಿಸಲಾಗಿದೆ.ಇದರ ನಡುವೆ ಈಗಾಗ ಲೇ ರಾಜ್ಯದಲ್ಲಿ ಶಿಕ್ಷಕರು ಕೂಡಾ ಸಾಕಷ್ಟು ಪ್ರಮಾಣ ದಲ್ಲಿ ಸಾಯುತ್ತಿದ್ದು ಈಗಾಗಲೇ ಸಾಕಷ್ಟು ಪ್ರಮಾಣ ದಲ್ಲಿ ಆತಂಕದಲ್ಲಿರುವ ಶಿಕ್ಷಕರು ರಾಜ್ಯ ಸರ್ಕಾರದ ಈ ಒಂದು ಆದೇಶದಿಂದಾಗಿ ಗೊಂದಲದಲ್ಲಿ ಇದ್ದಾರೆ ಇನ್ನೂ ಇತ್ತ ಸಂಘಟನೆಯ ನಾಯಕರು ಯಾಕೇ ಮೌನವಾಗಿದ್ದಾರೆ ಅವರೇ ಉತ್ತರಿಸಬೇಕು