ನವದೆಹಲಿ –
ನರೇಂದ್ರ ಮೋದಿ ಸರ್ಕಾರ ನೇತೃತ್ವದ ಕೇಂದ್ರ ಸರ್ಕಾರ ನೌಕರರ ಇತ್ತೀಚಿಗೆ ತುಟ್ಟಿಭತ್ಯೆಯನ್ನ ಹೆಚ್ಚಿಸಿದೆ.ಡಿಎ ಶೇ.3ರಿಂದ ಶೇ.34ರಷ್ಟು ಏರಿಕೆಯಾಗಿದೆ.ಇದೀಗ ಕೇಂದ್ರ ಸರ್ಕಾರ ಶೀಘ್ರದಲ್ಲೇ ಉದ್ಯೋಗಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಮುಂದಾಗಿದ್ದು ತೀರ್ಮಾನವನ್ನು ತಗೆದುಕೊಂಡಿದೆ ಹೌದು ಸರ್ಕಾರವು ಈ ತಿಂಗಳು ನೌಕರರಿಗೆ ವೇತನ ಹೆಚ್ಚಳದ ಬಹುಮಾನವನ್ನ ನೀಡಲಿದ್ದು ಡಿಎ ನಂತರ ಇದೀಗ ಮನೆ ಬಾಡಿಗೆ ಭತ್ಯೆ ಹಾಗೂ ಇತರೆ ಭತ್ಯೆಗಳನ್ನ ಹೆಚ್ಚಿಸಲು ಸರ್ಕಾರ ಮುಂದಾಗಿರುವಂತಿದೆ.
ಹೌದು ಡಿಎ ಹೆಚ್ಚಳದ ನಂತರ ಎಚ್‌ಆರ್‌ಎ ಹೆಚ್ಚಾಗಲಿದೆ ಕಳೆದ ವರ್ಷ ಜುಲೈನಲ್ಲಿ ಎಚ್‌ಆರ್‌ಎ ಹೆಚ್ಚಿಸಲಾಗಿತ್ತು.ಆ ನಂತರ ಡಿಎ ಕೂಡ ಶೇ.25ರಿಂದ ಶೇ.28ಕ್ಕೆ ಏರಿಕೆಯಾ ಗಿದೆ. ಈಗ ಡಿಎ ಯನ್ನು 34% ಕ್ಕೆ ಹೆಚ್ಚಿಸಲಾಗಿದೆ, ಎಚ್ ಆರ್‌ಎಯನ್ನು ಸಹ ಮಾರ್ಪಡಿಸಬಹುದು.ಸರ್ಕಾರಿ ನೌಕರರಿಗೆ ಅವರು ಕೆಲಸ ಮಾಡುವ ನಗರದಿಂದ HRA ನಿರ್ಧರಿಸಲಾಗುತ್ತದೆ.ನಗರಗಳು ಮೂರು ವಿಭಾಗಗಳನ್ನು ಹೊಂದಿವೆ.ಒಂದು ವರ್ಗದ ನಗರಗಳಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸರ್ಕಾರಿ ನೌಕರರು HRAನಲ್ಲಿ 3 ಶೇಕಡಾ ಹೆಚ್ಚಳವನ್ನು ಕಾಣುವ ಸಾಧ್ಯತೆಯಿದೆ ಎಂದು ಮಾಹಿತಿ.ಪ್ರಸ್ತುತ ಈ ನಗರಗಳಲ್ಲಿನ ಉದ್ಯೋಗಿಗಳು ಮೂಲ ವೇತನದ 27%ರಷ್ಟು HRA ಅನ್ನು ಪಡೆಯುತ್ತಾರೆ ವೈ ವರ್ಗದ ನಗರಗಳಿಗೆ ಈ ಹೆಚ್ಚಳವು ಶೇಕಡಾ 2ರವರೆಗೆ ಇರುತ್ತದೆ.ಈ ಪ್ರದೇಶಗಳಲ್ಲಿ ಕೆಲಸ ಮಾಡುವ ಉದ್ಯೋಗಿ ಗಳು 18-20% HRA ಪಡೆಯುತ್ತಾರೆ.
Z ವರ್ಗದ ನಗರಗಳು ತಮ್ಮ HRA ಅನ್ನು ಶೇಕಡಾ 1ರಷ್ಟು ಹೆಚ್ಚಿಸಬಹುದು.ಪ್ರಸ್ತುತ ಈ ಪ್ರದೇಶಗಳಲ್ಲಿನ ಉದ್ಯೋಗಿ ಗಳಿಗೆ 9-10 ಪ್ರತಿ ಶತದಷ್ಟು HRA ಪಾವತಿಸಲಾಗುತ್ತದೆ.