ನವದೆಹಲಿ –
7ನೇ ವೇತನ ಆಯೋಗ ಜಾರಿಗೆ ವಿಚಾರ ಕುರಿತಂತೆ ನಮ್ಮ ರಾಜ್ಯದಲ್ಲಿ ಸಮಿತಿ ರಚನೆ ಮಾಡಿ ನಾಲ್ಕೈದು ತಿಂಗಳು ಕಳೆದರು ಇನ್ನೂ ಕೂಡಾ ವರದಿ ಸಲ್ಲಿಕೆಯಾಗಿಲ್ಲ.ಹೀಗಾಗಿ ಈ ಒಂದು ವಿಚಾರ ಕುರಿತಂತೆ ರಾಜ್ಯದ ಸರ್ಕಾರಿ ನೌಕರರು ಹೋರಾಟಕ್ಕೆ ಕರೆ ನೀಡಿದ ಬೆನ್ನಲ್ಲೇ ಇದರಿಂದ ಎಚ್ಚೇತ್ತುಕೊಂಡಿರುವ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರದ ರೂಪದಲ್ಲಿ ವೇತನವನ್ನು ಹೆಚ್ಚಳ ಮಾಡಿದೆ.
ಇದು ಒಂದು ವಿಚಾರವಾದರೆ ಇನ್ನೂ ಕೂಡಾ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ಮತ್ತೊಂದು ಸಿಹಿ ಸುದ್ದಿ ನೀಡಲು ಮುಂದಾಗಿದ್ದು ಈಗಾಗಲೇ ಜಾರಿಯಲ್ಲಿರುವ 7ನೇ ವೇತನ ಆಯೋಗದ ಬದಲಿಗೆ 8ನೇ ವೇತನ ಆಯೋಗ ಜಾರಿಗೆ ಬರಲಿದೆ.
50 ಲಕ್ಷ ಸರ್ಕಾರಿ ನೌಕರರು ಶೇಕಡ 4ರಷ್ಟು ಡಿಎ ಹೆಚ್ಚಳ ಮತ್ತು ಫಿಟ್‌ಮೆಂಟ್ ಅಂಶದಲ್ಲಿ ಪರಿಷ್ಕರ ಣೆಯನ್ನು ನಿರೀಕ್ಷಿಸುತ್ತಿರುವ ಸಮಯದಲ್ಲಿ ಸರ್ಕಾರವು 8ನೇ ವೇತನ ಆಯೋಗವನ್ನು ಶೀಘ್ರದಲ್ಲೇ ಆರಂಭಿಸಲು ಯೋಜಿಸುತ್ತಿದೆ.
7 ವೇತನ ಆಯೋಗಕ್ಕೆ ಹೋಲಿಸಿದರೆ ಹೊಸ ಆಯೋಗವು ಬಹಳಷ್ಟು ಬದಲಾವಣೆಗಳನ್ನು ಕಾಣುವ ನಿರೀಕ್ಷೆಯಿದೆ. 8ನೇ ವೇತನ ಆಯೋಗ ವನ್ನು 2024ರಲ್ಲಿ ಜಾರಿಗೆ ತರಬಹುದು ಮತ್ತು ಎರಡು ವರ್ಷಗಳ ನಂತರ ಅಂದರೆ 2026ರಲ್ಲಿ ಜಾರಿಗೆ ಬರಬಹುದು ಎಂದು ವರದಿಗಳು ತಿಳಿಸಿವೆ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೌಕರರಿಗೆ ಸರ್ಕಾರ ಈ ದೊಡ್ಡ ಕೊಡುಗೆ ನೀಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೇ 2024 ರೊಳಗೆ ಇದು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.ದಾಖಲೀಕರಣ ಕಾರ್ಯ ಇನ್ನೂ ನಡೆಯುತ್ತಿರುವುದರಿಂದ ಮುಂದಿನ ವಾರದೊ ಳಗೆ 4 ಶೇಕಡಾ ಡಿಎ ಹೆಚ್ಚಳದ ಬಗ್ಗೆ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಅನ್‌ವರ್ಸ್‌ಗಾಗಿ ಸರ್ಕಾರವು ಮಾರ್ಚ್ 2023 ರಲ್ಲಿ ಫಿಟ್‌ಮೆಂಟ್ ಅಂಶವನ್ನು ಸಹ ಪರಿಷ್ಕರಿಸು ತ್ತದೆ. ಈ ಹೆಚ್ಚಳವು ಜನವರಿ 1, 2023 ರಿಂದ ಜಾರಿಗೆ ಬರಲಿದೆ. ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ 18 ತಿಂಗಳ ಡಿಎ ಬಾಕಿಯನ್ನು ನೀಡುವ ನಿರೀಕ್ಷೆ ಇದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..