ಬೆಂಗಳೂರು –
ಈಗಾಗಲೇ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವಿಚಾರದಲ್ಲಿ ಗುಡ್ ನ್ಯೂಸ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಈಗ ಬರುವ ವರ್ಷದಿಂದ ಮತ್ತೊಂದು ಶುಭ ಸುದ್ದಿ ಯನ್ನು ನೀಡಲು ಮುಂದಾಗಿದೆ ಹೌದು ಕಳೆದ ಕೆಲ ದಿನಗಳಿಂದ ರಾಜ್ಯದ ಸರ್ಕಾರಿ ನೌಕರರು ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು ಕ್ಯಾಶ್ ಲೆಸ್ ಸೇವೆ ಬರುವ ವರ್ಷದಿಂದ ಆರಂಭವಾಗಲಿದೆ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಈ ಒಂದು ಮಾಹಿತಿಯನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೊಸ ವರ್ಷದಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಚಿಕಿತ್ಸೆ ಸಿಗಲಿದೆ ಎಂಬ ಮಾಹಿತಿಯನ್ನು ನೀಡಿ ದರು.ಸರಕಾರಿ ನೌಕರರು ಹಾಗೂ ಕುಟುಂಬದ ವರು ಆರೋಗ್ಯ ಸಮಸ್ಯೆ,ಮಾರಣಾಂತಿಕ ಕಾಯಿ ಲೆಗಳಿಗೆ ಚಿಕಿತ್ಸೆ ಪಡೆಯಲು ಮಾಡಿದ ವೆಚ್ಚ ಮರು ಪಾವತಿ ಪಡೆಯಲು ಹರಸಾಹಸ ಪಡಬೇಕಿತ್ತು ಅಲ್ಲದೆ ಚಿಕಿತ್ಸೆಗೆ ನಿಗದಿಪಡಿಸಿರುವ ಮೊತ್ತವೂ ಕಡಿಮೆ ಇತ್ತು. ಅವೆಲ್ಲವನ್ನು ನಿವಾರಿಸಿ ನಗದು ರಹಿತವಾಗಿ ಚಿಕಿತ್ಸೆ ವ್ಯವಸ್ಥೆಗಾಗಿ ಸಂಘ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ನೌಕರಸ್ನೇಹಿ ಯೋಜನೆ ಜಾರಿಯಾಗುತ್ತಿದೆ ಎಂದರು.
ರಾಜ್ಯ ಸರಕಾರದ 5.50 ಲಕ್ಷ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ನಗದು ರಹಿತ ಚಿಕಿತ್ಸಾ ವ್ಯವಸ್ಥೆ ಜನವರಿಯಲ್ಲಿ ಜಾರಿ ಯಾಗಲಿದೆ.ನೌಕರರು ಹಾಗೂ ಕುಟುಂಬದವರು ಆರೋಗ್ಯ ಸಮಸ್ಯೆ, ಮಾರಣಾಂತಿಕ ಕಾಯಿಲೆಗ ಳಿಗೆ ಚಿಕಿತ್ಸೆ ಪಡೆಯಲು ಮಾಡಿದ ವೆಚ್ಚ ಮರು ಪಾವತಿ ಪಡೆಯಲು ಹರಸಾಹಸ ಪಡುವುದು ಇತ್ಯಾದಿ ಸಮಸ್ಯೆಗಳಿಂದ ಇನ್ನು ಮುಕ್ತಿ ಸಿಗಲಿದ್ದು ಹೊಸ ಯೋಜನೆ ಜನವರಿಯಲ್ಲಿ ಜಾರಿಯಾಗ ಲಿದೆ ಎಂದರು.
ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಇನ್ನುಮುಂದೆ ರಾಜ್ಯದ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಸೇವೆ ಸಿಗಲಿದೆ ಮಾರಣಾಂತಿಕ ಕಾಯಿಲೆಗಳೂ ಸೇರಿ ದಂತೆ 1,226 ಆರೋಗ್ಯ ಸಮಸ್ಯೆಗಳಿಗೆ ಮಲ್ಪಿ ಸ್ಪೆಷ್ಟಾಲಿಟಿ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಳಲ್ಲಿ ಶಸ್ತ್ರಚಿಕಿತ್ಸೆ ಒಳಗೊಂಡಂತೆ ಸಂಪೂರ್ಣ ನಗದುರಹಿತ ಚಿಕಿತ್ಸೆ ಸಿಗಲಿದ್ದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಉಚಿತ ಆರೋಗ್ಯ ಯೋಜನೆ’ಗೆ ರಾಜ್ಯ ಸರಕಾರ ಅಂಗೀಕಾರ ನೀಡಿದೆ ಹೊಸ ವರ್ಷದಿಂದ ಯೋಜನೆ ಜಾರಿಗೆ ಬರಲಿದೆ ಎಂದರು.
ಆರೋಗ್ಯ ಸಮಸ್ಯೆ, ಮಾರಣಾಂತಿಕ ಕಾಯಿಲೆಗ ಳಿಗೆ ಚಿಕಿತ್ಸೆ ಪಡೆಯಲು ಮಾಡಿದ ವೆಚ್ಚ ಮರುಪಾ ವತಿ ಪಡೆಯಲು ಹರಸಾಹಸ ಪಡಬೇಕಿತ್ತು. ಅಲ್ಲದೆ ಚಿಕಿತ್ಸೆಗೆ ನಿಗದಿಪಡಿಸಿರುವ ಮೊತ್ತವೂ ಕಡಿಮೆ ಇತ್ತು. ಆ ಎಲ್ಲ ಅಡೆತಡೆಗಳು, ನಿಯಮಾ ವಳಿ ಅಡಿಯಲ್ಲಿನ ತೊಡಕುಗಳನ್ನು ನಿವಾರಿಸಿ ನಗದುರಹಿತವಾಗಿ ಚಿಕಿತ್ಸೆ ವ್ಯವಸ್ಥೆಗಾಗಿ ಸಂಘ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ‘ನೌಕರ ಸ್ನೇಹಿ’ ಯೋಜನೆ ಜಾರಿಯಾಗುತ್ತಿದೆ ಎಂದು ಹೇಳಿದರು.ರಾಜ್ಯ ಸರಕಾರದ 5.50 ಲಕ್ಷ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ನಗದುರಹಿತ ಚಿಕಿತ್ಸಾ ವ್ಯವಸ್ಥೆ ಜನವರಿಯಲ್ಲಿ ಜಾರಿಯಾಗಲಿದೆ. ಅನಿರೀಕ್ಷಿತ ವಾಗಿ ಕೋವಿಡ್ ವೈರಾಣು ಕಾಣಿಸಿಕೊಂಡು ಸಾಕಷ್ಟು ಸಾವುನೋವು ಸಂಭವಿಸಿದ್ದರಿಂದ ಮುಂದೆ ಕಾಣಿಸಿಕೊಳ್ಳಬಹುದಾದ ಹೊಸ ಕಾಯಿಲೆಗಳು ಸೇರಿದಂತೆ 1226 ಬಗೆಯ ಕಾಯಿಲೆಗಳಿಗೆ ರಾಜ್ಯದ 888 ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಪಡೆಯಬಹುದಾಗಿದೆ.
ಆ ಮೂಲಕ ಸರಕಾರಿ ನೌಕರರ ವರ್ಗಕ್ಕೆ ಗುಣ ಮಟ್ಟದ ಆರೋಗ್ಯ ಸೇವೆ ಮೂಲಕ ಹೆಚ್ಚಿನ ಭದ್ರತೆ ಸಿಗಲಿದೆ.ನಿವೃತ್ತ ನೌಕರರಿಗೆ ಈ ಸೌಲಭ್ಯ ವಿಸ್ತರಣೆ ಸಂಬಂಧ ಪ್ರಯತ್ನ ನಡೆಸಲು ಚಿಂತಿಸ ಲಾಗಿದೆ.4.50 ಲಕ್ಷ ನಿವೃತ್ತ ನೌಕರರಿದ್ದು ಅವರಿಗೂ ಆಯ್ದ ಆರೋಗ್ಯ ಸಮಸ್ಯೆಗಳಿಗೆ ನಗದುರಹಿತ ಚಿಕಿತ್ಸೆ ಕಲ್ಪಿಸಲು ಪ್ರಯತ್ನಿಸಲಾಗು ವುದು. ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಯಾ ಗುವ ಬ್ಯಾಂಕ್ ಖಾತೆಯಿಂದಲೇ ಶುಲ್ಕ ಕಡಿತ ಮಾಡಿಕೊಂಡು ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.ಇನ್ನೂ ಈ ಒಂದು ವಿಚಾರ ಕುರಿತು ಹಲವು ಬಾರಿ ಷಡಾಕ್ಷರಿ ಸರ್ ಅಭಿಮಾನಿ ಬಳಗರದ ಬುದನೂರ ಮಹೇಶ್ ಮಂಡ್ಯ ಸೇರಿದಂತೆ ಬಳಗದ ಸರ್ವ ಸದಸ್ಯರು ಒತ್ತಾಯವನ್ನು ಮಾಡಿದ್ದರು.
ಸುದ್ದಿ ಸಂತೆ ನ್ಯೂಸ್…..