ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರು ಇನ್ಮುಂದೆ ಸಾಲಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಗೆ ಸರ್ಕಾರ ಅವಕಾಶವನ್ನು ನೀಡಿದೆ
ಹೌದು ಇದುವರೆಗೆ ಮ್ಯಾನುಯೆಲ್ ಮೂಲಕ ಸರ್ಕಾರಿ ವಿಮಾ ಇಲಾಖೆಯಿಂದ ಜೀವ ವಿಮಾ ಪಾಲಿಸಿಗಳಿಂದ ಸಾಲ ಸೌಲಭ್ಯವನ್ನು ಸರ್ಕಾರಿ ನೌಕರರು ಪಡೆಯಬೇಕಾ ಗಿತ್ತು ಆದ್ರೇ ಇದೀಗ ಆನ್ ಲೈನ್ ಮೂಲಕ ಸಾಲ ಮಂಜೂ ರಾತಿಗಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದೆ.
ಹೀಗಾಗಿ ಇನ್ಮುಂದೆ ಸರ್ಕಾರಿ ವಿಮಾ ಇಲಾಖೆಯಿಂದ ಜೀವ ವಿಮಾ ಪಾಲಿಸಿಗಳಿಂದ ಸಾಲ ಪಡೆಯಲು ಆನ್ ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಕುರಿತಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲೆ ವಿಮಾದಾರರಿಗೆ ಆನ್ ಲೈನ್ ನಲ್ಲಿ ಸಾಲ ಮಂಜೂರು ಮಾಡೋದಕ್ಕಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿಗೆ.ಈ ಸಾಫ್ಟ್ ವೇರ್ ನ್ನು ಪ್ರಾಯೋಗಿಕವಾಗಿ ಯಾದಗಿರಿ,ಕೊಡಗು,ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿ ದ್ದಾರೆ.
ಸರ್ಕಾರಿ ನೌಕರರಿಗೆ ಈ ಸಂಬಂಧ ತರಬೇತಿ ಕೂಡ ನೀಡುವಂತೆ ಸೂಚಿಸಲಾಗಿದ್ದು ಸಾಲದ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಸವೀಕರಿಸಿ ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ನಿರ್ವಹಿಸಲು ಸೂಚಿಸಲಾಗಿದೆ.
ಸಾಲಕ್ಕಾಗಿ ಸಲ್ಲಿಸಿದಂತ ಅರ್ಜಿಗಳ ದತ್ತಾಂಶ ಪರಿಶೀಲನೆ ಮುಗಿದಿರುವ ಪಾಲಿಸಿಗಳ ಮೇಲೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.ಆದುದರಿಂದ ದತ್ತಾಂಶ ಪರಿಶೀಲನೆ ಪೂರ್ಣಗೊಳ್ಳದಿರುವ ಪಾಲಿಸಿಗಳ ವಿಮಾದಾ ರರು ಸಾಲಕ್ಕೆ ಅರ್ಜಿ ಸಲ್ಲಿಸಲು ಅವಶ್ಯಕತೆ ಇದ್ದಲ್ಲಿ ದತ್ತಾಂಶ ಪರಿಶೀಲನೆಗಾಗಿ ಕೆಜಿಐಡಿ ಸಾಫ್ಟ್ ವೇರ್ ಮೂಲಕ ಮನವಿ ಸಲ್ಲಿಸುವಂತೆ ಸೂಚಿಸಿದ್ದಾರೆ.