ರಾಯಚೂರು –
ರಾಜ್ಯದಲ್ಲಿ ಮತ್ತೊಂದು ಸರ್ಕಾರಿ ನೌಕರರ ಸಂಘಟನೆ ಯೊಂದು ಆರಂಭ ಗೊಂಡಿದೆ ಹೌದು ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಿಂಧನೂರು ತಾಲೂಕು ಸಮಿತಿ ರಚನೆಗೊಂಡಿದೆ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಿಂಧನೂರು ತಾಲೂಕು ಘಟಕ ರಚನೆ ಮಾಡಿದ್ದು, ಫಸಿಯುಲ್ಲಾ ಖಾದ್ರಿ ಅಧ್ಯಕ್ಷರಾಗಿ ಸೈಯದ್ ಅಖ್ತರ್ ಅಲಿ ಗೌರವಾ ಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಘದ ರಾಜ್ಯ ಉಪಾಧ್ಯಕ್ಷ ಮೆಹಬೂಬ್, ಜಿಲ್ಲಾಧ್ಯಕ್ಷ ಸೈಯದ್ ಮಿನಾಹಜುಲ್ ಹಸನ್, ಜಿಲ್ಲಾ ಉಪಾಧ್ಯಕ್ಷ ರಿಯಾಜ್, ಜಿಲ್ಲಾ ಕಾರ್ಯದರ್ಶಿ ಎಂ.ಎ.ಯೂನುಸ್ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ಸಿಂಧನೂರು ತಾಲೂಕು ಕಾರ್ಯದರ್ಶಿಯಾಗಿ ಸಮೀರ್, ಖಜಾಂಚಿಯಾಗಿ ಎಂ.ಡಿ.ಯುನೂಸ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಂಧನೂರು ತಾಲೂಕಿನ ವಿವಿಧ ಇಲಾಖೆಯ ಮುಸ್ಲಿಂ ನೌಕರರು ಹಾಜರಿದ್ದರು, ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು.
ಸುದ್ದಿ ಸಂತೆ ನ್ಯೂಸ್ ರಾಯಚೂರು…..