ಬೆಂಗಳೂರು –
ಕನ್ನಡ ಚಿತ್ರರಂಗದ ನಾಯಕ ನಟ ಕಿಚ್ಚ ಸುದೀಪ್ ಮತ್ತೊಂದು ಸಾಮಾಜಿಕ ಕಾರ್ಯವನ್ನು ಮಾಡಿ ದ್ದಾರೆ.ಈಗಾಗಲೇ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಇವರು ಈಗ ಮತ್ತೊಂದು ಶಾಲೆಯನ್ನು ಅದು 133 ವರ್ಷಗಳ ಇತಿಹಾಸವನ್ನು ಹೊಂದಿರುವ ಸರ್ಕಾರಿ ಶಾಲೆಯೊಂದನ್ನು ಇವರು ದತ್ತು ತೆಗೆದುಕೊಂಡಿದ್ದಾರೆ.

ಕೇಲವ ನಟನೆ ಅಷ್ಟೇ ಜೀವನ ಅಲ್ಲದೇ ಅದರೊಂ ದಿಗೆ ಸಾಮಾಜಿಕ ಜವಾಬ್ದಾರಿ ಏನು ಎಂಬುದನ್ನು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡುವ ಮೂಲಕ ಇವರು ತೋರಿಸಿಕೊಟ್ಟಿದ್ದಾರೆ.

ನಟನೆಯ ಜೊತೆ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸುತ್ತಿರುವ ಕಿಚ್ಚ ಸುದೀಪ್ ಅವರು ತಮ್ಮ ತವರು ಜಿಲ್ಲೆ ಶಿವಮೊಗ್ಗದ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.

ವಿಶೇಷವೆಂದರೆ ಈ ಶಾಲೆಗೆ ಬರೋಬ್ಬರಿ 133 ವರ್ಷಗಳ ಇತಿಹಾಸವಿದೆ. ಕಿಚ್ಚ ಸುದೀಪ್ ಅವರ ಈ ಸಾಮಾಜಿಕ ಕಾಳಜಿ ಗೆ ಶಾಲೆಯ ಅಧಿಕಾರಿಗಳು ಸಾರ್ವಜನಿಕರು ಅಭಿಮಾನಿಗಳು ಶಾಲೆಯ ಶಿಕ್ಷಕರು ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ದತ್ತು ತೆಗೆದುಕೊಂಡಿರುವ ಶಾಲೆಗೆ ಸುದೀಪ್ ಅವರು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಿದ್ದಾರೆ.ವಿದ್ಯಾರ್ಥಿಗಳ ಓದಿಗೆ ಸಹಕಾರಿಯಾಗುವಂತೆ ನಟ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಿದ್ದಾರೆ ಸುದೀಪ್ ಅವರು.

ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳು ತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ವರ್ಷದ ಜುಲೈನಲ್ಲಿ ಅವರು ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದರು. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಆ ಶಾಲೆಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳ ಓದಿಗೆ ಸಹಕಾ ರಿಯಾಗುವ ಎಲ್ಲ ಸೌಲಭ್ಯಗಳನ್ನು ಕಿಚ್ಚ ಸುದೀಪ್ ಒದಗಿಸುತ್ತಿದ್ದು ಮೆಚ್ಚುವಂತಹ ಕಾರ್ಯವಾಗಿದೆ.