ಮಂಗಳೂರು –
ಸಧ್ಯ ರಾಜ್ಯದಲ್ಲಿನ ಹಿಜಾಬ್ ಕೇಸರಿ ಸಮವಸ್ತ್ರದ ವಿವಾದದ ಬೆನ್ನಲ್ಲೇ ರಾಜ್ಯದ ಸರ್ಕಾರಿ ಶಾಲೆಯೊಂದರಲ್ಲಿ ಮತ್ತೊಂದು ವಿವಾದ ಕಂಡು ಬಂದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಪೊಟೊ ವೈರಲ್ ಆಗಿದೆ.ಹೌದು ವಿವಾದ ತಾರಕಕ್ಕೇರಿರುವಾಗಲೇ ಮತ್ತೊಂದು ವಿವಾದ ತಲೆ ಎತ್ತಿದ್ದು ಸರ್ಕಾರಿ ಶಾಲೆಯೊಂದರಲ್ಲಿ ನಮಾಝ್ ಮಾಡಲಾಗಿದೆ ವಿದ್ಯಾರ್ಥಿಗಳು ಶಾಲೆಯಲ್ಲೇ ನಮಾಜ್ ಮಾಡಿದ್ದು ಆ ವಿಡಿಯೋ ವೈರಲ್ ಆಗಿದೆ

ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರ್ಕಾರಿ ಶಾಲೆಯಲ್ಲಿ ನಮಾಜ್ ಪ್ರಕರಣ ನಡೆದಿದೆ.ಇಲ್ಲಿ 6-7ನೇ ತರಗತಿಯ ಐದು ಮಂದಿ ವಿದ್ಯಾರ್ಥಿಗಳು ನಮಾಜ್ ಮಾಡಿದ್ದು ಇದೀಗ ಆ ಬಗ್ಗೆ ಆಕ್ಷೇಪ ವ್ಯಕ್ತವಾಗ ಲಾರಂಭಿಸಿದ್ದು ಸಾರ್ವಜನಿಕರು ಅಸಮಾಧಾನ ಗೊಂಡಿ ದ್ದಾರೆ.ಕಳೆದ ಮೂರು ವಾರಗಳಿಂದ ಶಾಲಾ ಕೊಠಡಿಯಲ್ಲಿ ಈ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ ಎನ್ನಲಾ ಗಿದ್ದುಬಶಾಲಾ ಸಿಬ್ಬಂದಿ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದ್ದು ಸಧ್ಯ ವಿಡಿಯೋ ಪೊಟೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ