ಬೆಂಗಳೂರು –

ಇತ್ತೀಚೆಗೆ ಕೋವಿಡ್ ಕಾರಣಕ್ಕಾಗಿ ವಲಸೆ ಮಕ್ಕಳು ಮರಳಿ ತಮ್ಮ ಸ್ವಂತ ಊರುಗಳಿಗೆ ಕುಟುಂಬ ಸಮೇತ ವಾಪಸ್ ಬಂದದ್ದು ಕೆಲಸದ ನಿಮಿತ್ತ ಬೇರೆ ಬೇರೆ ನಗರಗಳಿಗೆ ಉದ್ಯೋಗ ಅರಸಿ ಅಲ್ಲಿ ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ದಾಖಲು ಮಾಡಿ ತಮ್ಮ ಜೀವನವನ್ನು ನಡೆಸುತ್ತಾ ಬಹುತೇಕ ಕುಟುಂಬಗಳು ಬಂದಿವೆ.

ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಕೆಲಸ ಬಿಟ್ಟು ಮರಳಿ ತಮ್ಮ ಸ್ವಂತ ಊರುಗಳಿಗೆ ಬಹುತೇಕ ಕುಟುಂಬಗಳು ಬಂದಿದ್ದು, ಅಂತಹ ಕುಟುಂಬಗಳ ಮಕ್ಕಳಿಗೆ ಈಗ ಸರ್ಕಾರಿ ಶಾಲೆಗಳಿವೆ ದಾಖಲು ಮಾಡುತ್ತಿರುವುದು ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಬಹಳಷ್ಟು ದಾಖಲಾತಿ ಏರಿಕೆಯಾಗಿದೆ.

ಇದು ಸಂತೋಷದ ವಿಷಯ ಆದರೆ ಸರ್ಕಾರಿ ಶಾಲೆಗಳಿಗೆ ದಾಖಲಾದ ಮಕ್ಕಳ ಶಾಲಾ ಟಿಸಿ ತರಿಸಿಕೊಳ್ಳುವುದು ಮುಖ್ಯ ಶಿಕ್ಷಕರಿಗೆ ತುಂಬಾ ತಲೆ ನೋವಾಗಿದೆ ಏಕೆಂದರೆ ಖಾಸಗಿ ಶಾಲೆಯವರು ಅಂತಹ ಮಕ್ಕಳ ಟಿಸಿ ಕಳಿಸುತ್ತಿಲ್ಲ ಇದರ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸುವುದು ಅವಶ್ಯ ವಾಗಿದೆ.ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಸ್ಥಾಪಕ ರಾಜ್ಯ ಉಪಾದ್ಯಕ್ಷ ರೇವಣ್ಣ ಎಸ್ ಚಿಕ್ಕಮಗಳೂರು ಆಗ್ರಹಿಸಿದ್ದಾರೆ.

ಖಾಸಗಿ ಶಾಲೆಯಿಂದ ಮಕ್ಕಳ ನಡೆ ಈಗ ಸರ್ಕಾರಿ ಶಾಲೆ ಕಡೆಗೆ ಆದರೆ ಅಂತಹ ಮಕ್ಕಳ ಟಿಸಿ ಕೊಡಲು ಹಿಂದೇಟು ಹಾಕುತ್ತಿರುವ ಖಾಸಗಿ ಶಾಲೆಯವರು ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಎಂದು ಒತ್ತಾಯವನ್ನು ಮಾಡಿದ್ದಾರೆ

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಸ್ಥಾಪಕ ರಾಜ್ಯ ಉಪಾದ್ಯಕ್ಷ ರೇವಣ್ಣ ಎಸ್ ಚಿಕ್ಕಮಗಳೂರು ಆಗ್ರಹಿಸಿದ್ದಾರೆ. ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ಕೂಡಲೇ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಒತ್ತಾಯವನ್ನು ಮಾಡಿದರು

ಈಗಾಗಲೇ ಹತ್ತು ಹಲವಾರು ಕೆಲಸ ಕಾರ್ಯಗಳ ನಡುವೆ ಇದೊಂದು ಶಿಕ್ಷಕರಿಗೆ ದೊಡ್ಡ ತಲೆನೋವಿನ ಕೆಲಸವಾಗಿದ್ದು ಇನ್ನಾದರೂ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಸೂಕ್ತ ಪರಿಹಾರಕ್ಕೆ ಶಿಕ್ಷಕರು ಒತ್ತಾಯವನ್ನು ಮಾಡಿದ್ದಾರೆ
