ಉಡುಪಿ –
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅ.18 ರೊಳಗೆ ಪೂರ್ಣಗೊಳಿಸಲು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಇದೀಗ ಶಿಕ್ಷಕರಿಗೆ ಸಮೀಕ್ಷೆಯ ಸಂದರ್ಭದಲ್ಲಿ ಹೇಳದ ಹೊಸ ಕೆಲಸಗಳನ್ನು ವಹಿಸುತ್ತಿರುವುದು ಈ ಬಾರಿ ದೀಪಾವಳಿ ಖೋತಾ ಆಗಲಿದೆಯೇ ಆತಂಕ ಎದುರಾಗಿದೆ.
ಅ.18 ಶನಿವಾರ, ಅ.19, ರವಿವಾರ, ಅ.20 ರಿಂದ ದೀಪಾವಳಿ ಸಡಗರ ರಂಗೇರುತ್ತದೆ. ಬಹುತೇಕ ಶಾಲಾ ಕಾಲೇಜು, ವಿವಿಧ ಸಂಸ್ಥೆಗಳು ರಜೆ ಇರುತ್ತದೆ. ಈ ಅವಧಿಯಲ್ಲಿ ಎಲ್ಲರೂ ಹಬ್ಬದ ಗುಂಗಿನಲ್ಲಿರುತ್ತಾರೆ. ಶಿಕ್ಷಕರು ಮಾತ್ರ ಸಮೀಕ್ಷೆಯಲ್ಲಿರಬೇಕಾದ ಅನಿವಾ ರ್ಯತೆಯ ಆತಂಕ ಎದುರಾಗಿದ್ದು ಈ ಹಿಂದೆ ದಸರಾ ಹಬ್ಬ ವನ್ನು ಆಚರಣೆ ಮಾಡದ ಶಿಕ್ಷಕರಿಗೆ ಸಧ್ಯ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದ್ದು ಆತಂಕ ದಲ್ಲಿದ್ದಾರೆ.
ಇತ್ತ ಶಿಕ್ಷಕರ ಧ್ವನಿ ಯಾಗಿ ಈ ಒಂದು ವಿಚಾರ ವನ್ನು ಪ್ರಶ್ನೆ ಮಾಡಬೇಕಾದ ಶಿಕ್ಷಕ ಸಂಘಟನೆಯ ನಾಯಕರು ಮೌನವಾಗಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..