ಬೆಂಗಳೂರು –
ಪಠ್ಯಪುಸ್ತಕ ವಿವಾದದ ನಂತರ ಶಿಕ್ಷಣ ಇಲಾಖೆ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಳ್ಳೋ ರೀತಿ ಕಾಣ್ತಿದೆ.ಹೌದು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವು ದರಿಂದ ಮಕ್ಕಳಲ್ಲಿ ಅಸಮಾನತೆ ಉಂಟಾಗುತ್ತೆ, ಅವರ ಆರೋಗ್ಯಕ್ಕೆ ತೊಂದರೆಯಾಗುತ್ತೆ ಅಂತ ರಾಜ್ಯದ ಎನ್‌ಇಪಿ ಅಂದ್ರೆ ನೂತನ ಶಿಕ್ಷಣ ನೀತಿ ಸಮಿತಿ ಸರ್ಕಾರಕ್ಕೆ ಸಲ್ಲಿಸಿ ರೋ ವರದಿಯಲ್ಲಿ ಉಲ್ಲೇಖ ಮಾಡಿದೆ.
ಭಾರತೀಯರು ಸಣ್ಣಗಾತ್ರದ ದೇಹ ರಚನೆ ಹೊಂದಿದ್ದು ಮೊಟ್ಟೆ ಮಾಂಸದ ಸೇವನೆಯಿಂದ ಮಕ್ಕಳಲ್ಲಿ ಕೊಬ್ಬು ಸೇರಿಕೊಳ್ಳುತ್ತೆ.ಮೊಟ್ಟೆ ಮಾಂಸದ ಸೇವನೆಯಿಂದ ರೋಗ ಗಳು ಬರುತ್ತೆ.ಇದರಿಂದ ಮಕ್ಕಳ ಜೀವನ ಶೈಲಿ ಮೇಲೆ ಪ್ರಭಾವ ಬೀರುತ್ತೆ.ಹೀಗಾಗಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಮೊಟ್ಟೆ ನೀಡಬಾರದು ಅಂತ ಎನ್‌ಇಪಿ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.ಇದರ ಬೆನ್ನಲ್ಲೇ ಎನ್‌ಇಪಿ ಸಮಿತಿ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬರ್ತಿದೆ. ದೇಶ ದಲ್ಲಿ ಶೇ.50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲ್ತಾ ಇರೋವಾಗ.ಸಮಿತಿಯ ವರದಿ ವಾಸ್ತವಾಂಶವನ್ನ ಅಣಕಿ ಸಿದಂತೆ ಇದೆ ಅಂತ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕಿಡಿಕಾರಿದ್ದಾರೆ.