ಬೆಂಗಳೂರು –
ರಾಜ್ಯದಲ್ಲಿ ಮತ್ತೊರ್ವ ಐಪಿಎಸ್ ಅಧಿಕಾರಿ ವೃತ್ತಿಗೆ ರಾಜೀನಾಮೆ ಯನ್ನು ನೀಡಿದ್ದಾರೆ ಹೌದು ಅಣ್ಣಾಮಲೈ ರಾಜೀನಾಮೆ ನೀಡಿ ಸೇವೆ ತ್ಯಜಿಸಿದ್ದ ಬೆನ್ನಲ್ಲೇ ಈಗ ರೈಲ್ವೆ ಪೊಲೀಸ್ ಎಡಿಜಿಪಿ ಬಿ. ಭಾಸ್ಕರ್ ರಾವ್ ಸಹ ತಮ್ಮ ಹುದ್ದೆ ರಾಜೀನಾಮೆ ನೀಡಿದ್ದಾರೆ.ಇನ್ನೂ ಭಾಸ್ಕರ್ ರಾವ್ ಅವರು ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ ಇಂದು ಕರ್ತವ್ಯಕ್ಕೆ ಹಾಜರಾಗಲಿರುವ ಭಾಸ್ಕರ್ ರಾವ್ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊ ಳಿಸಿ ಸೇವೆಯಿಂದ ನಿರ್ಗಮಿಸಲಿದ್ದಾರೆ.

ಇನ್ನೂ ವೈಯಕ್ತಿಕ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ.ನನ್ನ ಮನವಿಯನ್ನು ಅಂಗೀಕರಿಸಿ ಎಂದು ಭಾಸ್ಕರ್ ರಾವ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ 2021ರ ಸೆಪ್ಟೆಂಬರ್‌ನಲ್ಲಿ ಪತ್ರ ನೀಡಿದ್ದರು.ಪತ್ರ ಪರಿಶೀಲಿಸಿರುವ ಮುಖ್ಯ ಕಾರ್ಯದರ್ಶಿ ರಾಜೀನಾಮೆ ಅಂಗೀಕರಿಸಿ ಆದೇಶ ಪತ್ರವನ್ನು ಭಾಸ್ಕರ ರಾವ್ ಅವರಿಗೆ ಕಳುಹಿಸಿದ್ದಾರೆ.ಇನ್ನೂ ರಾಜೀನಾಮೆ ವಿಚಾರ ಕುರಿತು ಸುದ್ದಿ ಸಂತೆ ಟೀಮ್ ನೊಂದಿಗೆ ಮಾತನಾ ಡಿದ ಭಾಸ್ಕರ್ ರಾವ್ ಅವರು ರಾಜೀನಾಮೆ ಅಂಗೀಕಾರ ಆಗಿದೆ.ಶನಿವಾರ ಪರೇಡ್‌ಗೆ ಹಾಜರಾಗುತ್ತೇನೆ.ನಂತರವೇ ಪೊಲೀಸ್ ಸೇವೆಯಿಂದ ಹೊರ ಬರುತ್ತೇನೆ.ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಕೆಲದಿನ ಬಿಟ್ಟು ತಿಳಿಸು ತ್ತೇನೆ ಎಂದರು.
ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್