ಬೆಂಗಳೂರು –
ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಇನ್ನೂ ಆರಂಭವಾ ಗದಿದ್ದರೂ ಕೂಡಾ ಈಗಾಗಲೇ ನೂರಕ್ಕೂ ಹೆಚ್ಚು ಶಿಕ್ಷಕರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಯಷ್ಟೇ ವರ್ಗಾವಣೆ ಮಾಡಲಾಗಿದೆ.ಒಂದು ಎರಡು ಮೂರು ನಾಲ್ಕು ಎನ್ನುತ್ತಾ ನಾಲ್ಕೈದು ಶಿಕ್ಷಕರ ವರ್ಗಾವಣೆಯ ಪಟ್ಟಿಗಳು ಮೇಲಿಂದ ಮೇಲೆ ಬಂದಿದ್ದೆ ಬಂದಿದ್ದು.ವರ್ಗಾವಣೆಯಾದ ಈ ಒಂದು ಲಿಸ್ಟ್ ನಲ್ಲಿಯೇ ಶಿಕ್ಷಣ ಸಚಿವರಿಂದ ಇವುಗಳು ಅನುಮೋದನೆಗೊಂಡಿವೆ ಎಂಬ ಶಬ್ದಗಳನ್ನು ಉಲ್ಲೇಖ ಮಾಡಿದ್ದು ವರ್ಗಾವಣೆಯ ನಿರೀಕ್ಷೆ ಯಲ್ಲಿರುವ ಶಿಕ್ಷಕರೆಲ್ಲರೂ ಅಸಮಧಾನಗೊಂಡಿದ್ದು ಈ ಕುರಿತಂತೆ ಶಿಕ್ಷಕರ ಧ್ವನಿಯಾಗಿರುವ ನಾಡಿನ ಶಿಕ್ಷಕ ಸಂಘಟನೆಯ ನಾಯಕರು ಮಾತನಾಡುತ್ತಿಲ್ಲ ವರ್ಗಾವಣೆ ಸಿಗದೆ ನಾಲ್ಕು ದಿಕ್ಕುಗಳಲ್ಲಿ ಸಿಲುಕಿಕೊಂ ಡು ಶಿಕ್ಷಕರು ಒದ್ದಾಡುತ್ತಿದ್ದಾರೆ.
ಇದು ವಿಚಾರ ಒಂದು ಕಡೆಯಾದರೆ ಇನ್ನೂ ಇದರ ಬೆನ್ನಲ್ಲೇ ಇನ್ನೂ ಸಾಕಷ್ಟು ಅಂದಾಜು ಐದನೂರಕ್ಕೂ ಹೆಚ್ಚು ಶಿಕ್ಷಕರನ್ನು ಅವರು ಕೇಳಿ ಕೇಳಿದಲ್ಲಿ ವರ್ಗಾ ವಣೆಯನ್ನು ಮಾಡಲಾಗಿದೆಯಂತೆ ಇದು ಕೂಡಾ ಆದೇಶವಾಗಿದ್ದು ಈ ಒಂದು ಲಿಸ್ಟ್ ಗಳು ಹೊರಗೆ ಬಂದರೆ ಈಗಾಗಲೇ ಅಸಮಾಧಾನಗೊಂಡಿರುವ ಶಿಕ್ಷಕರು ಮತ್ತಷ್ಟು ಸಿಡಿದೆಳುತ್ತಾರೆ ಏನಾದರೂ ಸಮಸ್ಯೆಯಾಗುತ್ತದೆ ಎಂಬ ಒಂದೇ ಒಂದು ಕಾರಣ ಕ್ಕಾಗಿ ಆ ಒಂದು ಪಟ್ಟಿಯನ್ನು ಗೌಪ್ಯವಾಗಿ ಇಟ್ಟಿದ್ದಾ ರಂತೆ.
ಈ ಒಂದು ವಿಚಾರವನ್ನು ಬೆಂಗಳೂರಿನಲ್ಲಿರು ಶಿಕ್ಷಣ ಇಲಾಖೆಯಲ್ಲಿನ ಹಿರಿಯ ಅಧಿಕಾರಿಯೊಬ್ಬರು ಹಾಗೇ ಶಿಕ್ಷಕರೊಬ್ಬರು ಸುದ್ದಿ ಸಂತೆಗೆ ಹೇಳಿದ್ದಾರೆ. ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡುತ್ತಿರುವ ನಿಮ್ಮ ಸುದ್ದಿ ಸಂತೆ ವಿಭಿನ್ನವಾಗಿ ನಾಡಿನ ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡುತ್ತಿದ್ದು ಶೀಘ್ರದಲ್ಲಿ ಯೇ ದಾಖಲೆಗಳನ್ನು ಕಲೆಹಾಕುತ್ತಿದ್ದುಗೌಪ್ಯವಾಗಿಟ್ಟ ವರ್ಗಾವಣೆಯ ಲಿಸ್ಟ್ ನ್ನು ಬಹಿರಂಗಗೊಳಿಸುತ್ತದೆ ಇಲ್ಲವೇ ಅದನ್ನು ರದ್ದುಗೊಳಿಸುತ್ತದೆ ಈ ಎರಡು ಕೆಲಸಗಳನ್ನು ಮಾಡೇ ಮಾಡುತ್ತದೆ. ಒಟ್ಟಾರೆ ಏನೇ ಆಗಲಿ ಕಳೆದ ಹತ್ತು ಇಪ್ಪತ್ತು ಇಪ್ಪತ್ತೈದು ವರ್ಷಗ ಳಿಂದ ವರ್ಗಾವಣೆಯ ನಿರೀಕ್ಷೆಯಲ್ಲಿರು ನಾಡಿನ ಶಿಕ್ಷಕರಿಗೆ ಅನ್ಯಾಯವಾಗದಿರಲಿ ಎಂಬುದೇ ಸುದ್ದಿ ಸಂತೆಯ ಆಶಯವಾಗಿದ್ದು. ಈಗಾಗಲೇ ನೂರಕ್ಕೂ ಹೆಚ್ಚು ಶಿಕ್ಷಕರ ವರ್ಗಾವಣೆಯಾಗಿದ್ದು ಅದರ ಬೆನ್ನಲ್ಲೇ ಮತ್ತೇ ಐದನೂರಕ್ಕೂ ಹೆಚ್ಚು ಶಿಕ್ಷಕರ ವರ್ಗಾವಣೆಯಾಗಿದ್ದು ಲಿಸ್ಟ್ ಕೂಡಾ ಸಿದ್ದವಾಗಿದ್ದು ಅದೇನಾದರೂ ಹೊರಗೆ ಬಂದರೆ ರಾಜ್ಯದಲ್ಲಿ ಶಿಕ್ಷಕರು ಈಗಾಗಲೇ ವರ್ಗಾವಣೆವಿಲ್ಲದೇ ನೋವಿನ ಲ್ಲಿರುವ ಶಿಕ್ಷಕರು ಬೀದಿಗಿಳಿಯುತ್ತಾರೆ ಎಂಬ ಒಂದೇ ಒಂದು ಕಾರಣಕ್ಕಾಗಿ ಆ ಒಂದು ಲಿಸ್ಟ್ ನ್ನು ಗೌಪ್ಯ ವಾಗಿಟ್ಟಿದ್ದಾರೆ.ಆದ್ರೂ ಕೂಡಾ ನಮ್ಮ ಶಿಕ್ಷಕರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯ ಕರೇ ಎಲ್ಲಿದ್ದಿರಾ ದಯಮಾಡಿ ಇನ್ನಾದರೂ ಈ ಕುರಿತಂತೆ ಅವಲೋಕನ ಮಾಡಿ ನೊಂದುಕೊಂ ಡಿರು ಶಿಕ್ಷಕರಿಗೆ ನ್ಯಾಯವನ್ನು ಒದಗಿಸಿಕೊಡಿ ಎಂಬುದು ನಮ್ಮ ಆಶಯ.