ಬೆಂಗಳೂರು –
ಮಹಾಮಾರಿ ಕೊರೊನಾ ಗೆ ರಾಜ್ಯ ನಾಳೆ ಸಂಜೆ ಯಿಂದ ಲಾಕ್ ಡೌನ್ ಆಗಲಿದೆ.ಕೋವಿಡ್ ನಿಯಂ ತ್ರಣ ಮಾಡಲು ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿ ಯೂರಪ್ಪ ನೇತ್ರತ್ವದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡು ವ ಕುರಿತಂತೆ ಮತ್ತೊಮ್ಮೆ ಲಾಕ್ ಡೌನ್ ಮಾಡಲು ಒಪ್ಪಿಗೆಯನ್ನು ಕೈಗೊಳ್ಳಲಾಗಿದೆ.ಇನ್ನೂ ಹದಿನಾಲ್ಕು ದಿನಗಳ ಲಾಕ್ ಡೌನ್ ನಲ್ಲಿ ರಾಜ್ಯದಲ್ಲಿ ಏನೇನಿರು ತ್ತದೆ ಏನೇನಿರೊದಿಲ್ಲ ಎಂಬ ಕುರಿತಂತೆ ನೊಡೊದಾ ದರೆ

ಇವುಗಳು ಇರುತ್ತವೆ.
- ಬೆಳಿಗ್ಗೆ 6 ರಿಂದ 10 ವರೆಗೆ ದಿನಸಿ, ಹಾಲು ಮತ್ತು ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ.
- ಗಾರ್ಮೆಂಟ್ಸ್ ಹೊರತುಪಡಿಸಿ ಉಳಿದ ಎಲ್ಲ ಉತ್ಪಾದನಾ ಉದ್ಯಮಗಳ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ.
- ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ.
- ಜವಳಿ, ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಅವಕಾಶ.
- ಅಂತರರಾಜ್ಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ.
- ಹೊಟೇಲ್‌ನಿಂದ ಪಾರ್ಸೆಲ್ ಒಯ್ಯಲು ಅವಕಾಶ.
- ಬಾರ್‌ಗಳಿಂದ ಮದ್ಯವನ್ನು ಪಾರ್ಸೆಲ್ ಒಯ್ಯಬಹುದು.
ಇವುಗಳು ಇರೊದಿಲ್ಲ.
- ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇರುವುದಿಲ್ಲ.
- ತುರ್ತು ಸೇವೆ ಬಿಟ್ಟು ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.
- ಬೆಂಗಳೂರು ಮೆಟ್ರೋ ರೈಲು ಬಂದ್.
- ಕಸಾಪ ಚುನಾವಣೆ ಸೇರಿ ಎಲ್ಲಾ ಚುನಾವಣೆಗಳನ್ನು 6 ತಿಂಗಳು ಕಾಲ ಮುಂದೂಡಿಕೆ.
- ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆಗಳನ್ನು ಬಿಟ್ಟು ಉಳಿದ ಇಲಾಖೆಗಳು ಕಾರ್ಯನಿರ್ವಹಿಸುವುದಿಲ್ಲ.
- ಮದುವೆಗಳನ್ನು ನಡೆಸಬಹುದು. ಈ ಸಂಬಂಧ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿ ಅನ್ವಯವಾಗಲಿದೆ.
ಇವುಗಳು ಲಾಕ್ ಡೌನ್ ಸಮಯದಲ್ಲಿ ಇರುವ ಮತ್ತು ನಿರ್ಭಂಧಕ್ಕೊಳಗಾಗಿರುವ ಸೌಲಭ್ಯಗಳಾದರೆ ಇನ್ನೂ ಮುಖ್ಯವಾಗಿ ಹೊಟೇಲ್ ಮತ್ತು ಬಾರ್ ಗಳಿಂದ ಮಧ್ಯವನ್ನು ತಗೆದುಕೊಂಡು ಹೊಗಲು ಪಾರ್ಸಲ್ ಗೆ ಅವಕಾಶವನ್ನು ನೀಡಲಾಗಿದೆ ಆದರೆ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು ಹೀಗಾಗಿ ಸಾರ್ವಜನಿಕರು ಯಾರು ಕೂಡಾ ಹೊರಗ ಡೆ ಬರಲು ಹಿಂದೇಟು ಹಾಕುತ್ತಾರೆ.ಇದರಿಂದ ಹೊಟೇಲ್ ಮತ್ತು ಮಧ್ಯದ ಅಂಗಡಿಗಳಿಗೆ ಅವಕಾಶ ಕೊಟ್ಟರೂ ಕೊಡಲಾರಂದತಾಗಿದೆ.ಇನ್ನೂ ಇದರೊಂ ದಿಗೆ ಇನ್ನೂ ಕೆಲ ವಿಚಾರಗಳ ಕುರಿತಂತೆ ರಾಜ್ಯದ ಜನರು ಇನ್ನೂ ಕೂಡಾ ಗೊಂದಲದಲ್ಲಿ ಇದ್ದಾರೆ ಹೀಗಾಗಿ ನಾಳೆ ಸಂಜೆಯಿಂದ ರಾಜ್ಯದಲ್ಲಿ ಆರಂಭ ವಾಗಲಿರುವ ಲಾಕ್ ಡೌನ್ ನಲ್ಲಿ ಏನೇನಿರುತ್ತದೆ ಏನೇನಿರುವುದಿಲ್ಲ ಎಂಬುದು ಇನ್ನೂ ಗೊಂದಲದ ಗೂಡಾಗಿದ್ದ ರಾಜ್ಯ ಸರ್ಕಾರವೇ ಇದನ್ನು ಪರಿಹಾರ ಮಾಡಬೇಕಿದೆ