BRTS ಯೋಜನೆಗೆ ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿ ಗರಿ

Suddi Sante Desk

ಧಾರವಾಡ –

ಬಹುಶಃ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಸಂಚಾರ ಮಾಡುತ್ತಿರುವ BRTS ಯೋಜನೆಯನ್ನು ಮೆಚ್ಚಿಕೊಂಡವರು ಒಬ್ಬರು ಸಿಗೊದಿಲ್ಲ. ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಅವಳಿ ನಗರದ ಮಧ್ಯೆ ಆರಂಭಗೊಂಡ ಈ ಒಂದು ದೊಡ್ಡ ಪ್ರಮಾಣದ ಯೋಜನೆಯಿಂದ ಲಾಭವಂತೂ ಅಗಿಲ್ಲ. ಬದಲಿಗೆ ಸಾಕಷ್ಟು ಪ್ರಮಾಣದಲ್ಲಿ ಜೀವಹಾನಿಗಳು ಅಪಾರ ನಷ್ಟವಾಗಿದೆ.

ಹುಬ್ಬಳ್ಳಿ ಧಾರವಾಡ ಮಧ್ಯದ ಹೆದ್ದಾರಿ ಸಾವಿನ ದಾರಿಯಾದರೆ ಇನ್ನೂ ಅವಳಿ ನಗರದ ಈ ಒಂದುBRTS ಯೋಜನೆ ಯಿಂದ ಅವಳಿ ನಗರದ ಜನತೆ ಪರದಾಡುತ್ತಿದ್ದಾರೆ‌.ಒಬ್ಬರು ಇಷ್ಟಪಟ್ಟಿ ಎಂಬ ಮಾತು ಅವಳಿ ನಗರದಲ್ಲಿ ಕೇಳಿ ಬರುತ್ತದೆ. ಹೊರವಲಯದಲ್ಲಿ. ದಿನ ಬೆಳಗಾದರೆ ಸದಾ ಒಂದಿಲ್ಲೊಂದು ರೀತಿಯಲ್ಲಿ ಎಡವಟ್ಟುಗಳು ಈ ಒಂದು ಯೋಜನೆಯಿಂದ ಕಂಡು ಬರುತ್ತವೆ.

ಸಂಚಾರದ್ದು ಒಂದು ಸಮಸ್ಯೆಯಾದರೆ ಇನ್ನೂ ಮಳೆ ಬಂದರಂತೂ ಈ ಒಂದು ಯೋಜನೆ ಚಿತ್ರಣ ಕಣ್ಣೆದೆರು ಅನಾವರಣವಾಗುತ್ತದೆ. ಹೀಗಿರುವಾಗ ಈ ಒಂದು ಯೋಜನೆಗೆ ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿಯೊಂದು ಲಭಿಸಿದೆ.

ಭಾರತದ ಪ್ರತಿಷ್ಠಿತ ಸಂಸ್ಥೆಯಾದ SKOCH ಸಂಸ್ಥೆಯಿಂದ ಸುಸ್ಥಿರ ಮತ್ತು ಪರಿಸರ (Environment & Sustainability) ವರ್ಗದಡಿ ಕೊಡಮಾಡುವ 2020 ರ ಸಾಲಿನ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಯೋಜನೆಯು ಭಾಜನವಾಗಿದೆ. ಈ ಮೂಲಕ ಅವಳಿ ನಗರವು ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಯಶಸ್ಸನ್ನು ಪ್ರದರ್ಶಿಸಿದ ಎನ್ನಬಹುದಾಗಿದೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಒಟ್ಟಾರೆ ಏನೇ ಆಗಲಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯೊಂದು ಬಂದಿದ್ದು ಸಂತಸದ ವಿಚಾರ ಆದರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.