ಬೆಂಗಳೂರು –
ಒಂದನೇಯ ಅಲೆಗಿಂತ ರಾಜ್ಯದಲ್ಲಿ ಕೋವಿಡ್ ನ ಎರಡನೇಯ ಆರ್ಭಟ ಸಾವು ನೋವುಗಳ ಪ್ರಮಾ ಣ ರಾಜ್ಯದಲ್ಲಿ ಹೆಚ್ಚಾಗುತ್ತಿದೆ.ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಹೀಗಾಗಿ ರಾಜ್ಯದಲ್ಲಿ ಕರೊ ನಾ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದ್ದು ಈ ಒಂದು ಸಮಯದಲ್ಲಿ, ಜನರ ನಿಯಂತ್ರಣಕ್ಕೆ ರಸ್ತೆಗಿ ಳಿದು ಕೆಲಸ ಮಾಡುತ್ತಿರುವ ಪೊಲೀಸರ ಮೇಲೂ ಕರೊನಾ ದಾಳಿ ಮುಂದುವರಿಸಿದೆ.ಹೌದು ಈಗಾಗ ಲೇ ಈ ಒಂದು ಮಹಾಮಾರಿಗೆ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗ ಳು ಸಾವಿಗೀಡಾಗಿದ್ದು ಇದೀಗ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಎಎಸ್ಐ ಮುನಿಯಪ್ಪ (58) ಕರೊನಾ ಸೋಂಕಿಗೆ ತುತ್ತಾಗಿ ಬಲಿಯಾಗಿದ್ದಾರೆ.

ಹೌದು ಕೆಲ ದಿನಗಳ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕರೊನಾ ಪರೀಕ್ಷೆ ನಡೆಸಲಾ ಗಿತ್ತು. ಆ ವೇಳೆ ಮುನಿಯಪ್ಪ ಅವರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಅವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

2016 ರಿಂದ ಬ್ಯಾಟರಾಯನಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಅವರ ಸಾವಿಗೆ ಶ್ರದ್ಧಾಂ ಜಲಿ ಸಲ್ಲಿಸಿರುವ ಪೊಲೀಸ್ ಇಲಾಖೆ ಇತರ ಪೊಲೀ ಸ್ ಸಿಬ್ಬಂದಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿ ದೆ.ಇನ್ನೂ ಇವರ ಸಾವಿನಿಂದಾಗಿ ಕೆಲ ಸಿಬ್ಬಂದಿಗಳು ಆತಂಕಗೊಂಡಿದ್ದಾರೆ.ಅಲ್ಲದೇ ಬ್ಯಾಟರಾಯನಪುರ ಪೊಲೀಸ್ ಠಾಣೆಯ 26 ಪೊಲೀಸ್ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದ ಶನಿವಾರದಿಂದ ಠಾಣೆಯನ್ನೇ ಸೀಲ್ ಡೌನ್ ಮಾಡ ಲಾಗಿದೆ.ಇವರೆಲ್ಲರೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬ್ಯಾಟರಾಯನಪುರ ಪೊಲೀಸ್ ಠಾಣೆಯನ್ನು ಸದ್ಯ ಸಮೀಪದಲ್ಲಿರುವ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ