ಬೆಂಗಳೂರು –
ಈಗಾಗಲೇ ಹತ್ತು ಹಲವಾರು ಕೆಲಸ ಕಾರ್ಯಗಳಿಂದ ಸದಾ ಬ್ಯೂಜಿಯಾಗಿರುವ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕ ರಿಗೆ ರಾಜ್ಯ ಸರ್ಕಾರ ಈಗ ಮತ್ತೊಂದು ಕೆಲಸ ನೀಡಲು ಮುಂದಾಗಿದೆ ಹೌದು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಗಾಗಿ ಜೂನ್ 1 ರಿಂದ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆ ಮೊಟ್ಟೆ ತಿನ್ನದ ಮಕ್ಕಳಿಗೆ ಎರಡು ಬಾಳೆಹಣ್ಣು ಹಾಗೂ ಶೇಂಗಾ ಚಿಕ್ಕಿ ವಿತರಿಸಲು ಸರ್ಕಾರ ನಿರ್ಧರಿಸಿದೆ.ಕಲ್ಯಾಣ ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ಯನ್ನು ನಿವಾರಿಸಲು ಸರ್ಕಾರ ನಿರ್ಧರಿಸಿದ್ದು ಬಿಸಿಯೂಟ ದೊಂದಿಗೆ ಮೊಟ್ಟೆ,ಬಾಳೆಹಣ್ಣು,ಶೇಂಗಾ ಚಿಕ್ಕಿ ನೀಡಲಾಗು ವುದು.
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಯಡಿ ಪೂರಕ ಪೌಷ್ಟಿಕ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುತ್ತದೆ.ಕಲ್ಯಾಣ ಕರ್ನಾಟಕದ ಬೀದರ್, ರಾಯಚೂರು,ಕಲ್ಬುರ್ಗಿ,ಯಾದಗಿರಿ,ಕೊಪ್ಪಳ,ಬಳ್ಳಾರಿ, ವಿಜಯನಗರ,ವಿಜಯಪುರ ಸೇರಿದಂತೆ 8 ಜಿಲ್ಲೆಗಳ ಶಾಲಾ ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ.ಜೂನ್ 1ರಿಂದ ಸೆಪ್ಟೆಂ ಬರ್ 11ರ ವರೆಗೆ ಹಾಗೂ ಅಕ್ಟೋಬರ್ ನಿಂದ ಫೆಬ್ರವರಿ ವರೆಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ.