ಬೆಂಗಳೂರು –

ನಾಳೆ ಬೆಳಗಾದರೆ ಹೊಸ ಶೈಕ್ಷಣಿಕ ವರುಷ ಆರಂಭ ಹೀಗಾಗಿ ಬಹುತೇಕ ಶಿಕ್ಷಕರಿಗೆ ಬಸ್ ಇಲ್ಲದಿದ್ದರೂ ಕೂಡಾ ಹೇಗಪ್ಪಾ ಶಾಲೆ ಗೆ ಹೊಗಬೇಕು ಎಂಬ ಚಿಂತೆ ಶಿಕ್ಷಕರಿದ್ದರೆ ಇನ್ನೂ ದೂರದ ಊರುಗಳಲ್ಲಿ ಸಿಲುಕಿಕೊಂಡ ಶಿಕ್ಷಕರಿಗೆ ಮತ್ತೊಂದು ದೊಡ್ಡ ಚಿಂತೆಯಾಗಿದ್ದು ಊರಿನಿಂದ ಕರ್ತವ್ಯ ಮಾಡುವ ಸ್ಥಳಕ್ಕೆ ಹೋಗಬೇಕು ಎಂಬ ಸಮಸ್ಯೆಯಲ್ಲಿದ್ದ ಶಿಕ್ಷಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ದೊಡ್ಡ ರಿಲೀಫ್ ನೀಡಿದ್ದಾರೆ. ಹೇಗಾದರೂ ಮಾಡಿ ನಾಳೆ ಯಿಂದ ಕರ್ತವ್ಯಕ್ಕೆ ಹಾಜರಾಗಿ ಎಂದಿದ್ದ ಬೆನ್ನಲ್ಲೇ ಈಗ ಮತ್ತೊಂದು ಪರಿಷ್ಕ್ರತ ಆದೇಶವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಡಿಸಿದ್ದು ಸಧ್ಯ ಕರ್ತವ್ಯ ಒಂದು ಕಡೆ ಸಧ್ಯ ಮತ್ತೊಂದು ಕಡೆಗೆ ಇರುವ ಶಿಕ್ಷಕರಿಗೆ ಒಂದು ವಾರಗಳ ಕಾಲ ಅವಕಾಶ ವನ್ನು ನೀಡಿದ್ದಾರೆ.

ಲಾಕ್ ಡೌನ್ ನಿಂದಾಗಿ ಸಿಲುಕಿಕೊಂಡ ಶಿಕ್ಷಕರಿಗೆ ಲಾಕ್ ಡೌನ್ ತೆರುವುಗೊಂಡ ನಂತರ ಕರ್ತವ್ಯ ಮಾಡುವ ಸ್ಥಳಕ್ಕೆ ಹೋಗುವಂತೆ ಒಂದು ವಾರಗಳ ಕಾಲ ಅವಕಾಶವನ್ನು ನೀಡಿದ್ದಾರೆ. ಹೇಗಾದರು ಮಾಡಿ ಶಿಕ್ಷಣ ಸಚಿವರು ನಮ್ಮ ಸಂಕಷ್ಟಕ್ಕೆ ಸ್ಪಂದಿ ಸುತ್ತಾರೆ ಬಸ್ ಗಳಿಲ್ಲದೇ ಜಿಟಿ ಜಿಟಿ ಮಳೆಯ ನಡುವೆ ಏನಾದರೂ ಮತ್ತೊಂದು ಸಿಹಿ ಸುದ್ದಿ ಸಿಗಬಹುದು ಎಂದುಕೊಳ್ಳಲಾಗಿತ್ತು ಹೀಗಾಗಿ ಮತ್ತೊಂದು ಆದೇಶ ಏನೋ ಬಂದಿದೆ ಆದರೆ ಲಾಕ್ ಡೌನ್ ನಿಂದಾಗಿ ಜಿಲ್ಲೆಗಳಲ್ಲಿ ಸಿಲುಕಿಕೊಂಡ ಆ ಶಿಕ್ಷಕರಿಗೆ ಸಧ್ಯ ಈ ಒಂದು ಆದೇಶದಲ್ಲಿ ರಿಲೀಫ್ ಸಿಕ್ಕಿದ್ದು ನಾಳೆ ಮತ್ತೇ ಏನಾದರೂ ಬರಬಹುದಾ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ ನಮ್ಮ ಶಿಕ್ಷಕರು