ನವದೆಹಲಿ-
ನಿರಂತರವಾಗಿ ಒಂದರ ಮೇಲೆ ಒಂದರಂತೆ ಬೆಲೆ ಏರಿಕೆಯ ನಡುವೆ ಈಗ ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್ ಮೊಬೈಲ್ ರಿಚಾರ್ಜ್ ದರ ಏರಿಕೆಯಾಗಲಿದ್ದು ಇದರಿಂದ ಮತ್ತೊಂದು ದೊಡ್ಡ ಪ್ರಮಾಣದಲ್ಲಿ ಶಾಕ್ ಕಾದಿದೆ.
ಹೌದು ದೇಶದಲ್ಲಿ ಈಗಾಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್, ದಿನಬಳಕೆ ವಸ್ತುಗಳು, ಅಗತ್ಯ ವಸ್ತುಗಳು, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಿ ಇನ್ನೂ ಜನರು ಚೇತರಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದರ ನಡುವೆಯೇ ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಶೀಘ್ರದಲ್ಲೇ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸಲಿವೆ ಎನ್ನಲಾಗಿದೆ. ಈಗ ಬಳಕೆದಾರರು ಡೇಟಾ ಮತ್ತು ವಾಯ್ಸ್ ಕಾಲಿಂಗ್ ಗಾಗಿ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ನೆಟ್ ವರ್ಕ್ ಪೂರೈಕೆದಾರ ಕಂಪನಿಗಳು ಮೊಬೈಲ್ ಟ್ಯಾರಿಫ್ ಗಳ ಬೆಲೆಯನ್ನು ಏರಿಸಲು ಹೊರಟಿವೆ ಎನ್ನಲಾಗಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ ಏಪ್ರಿಲ್ 1 ರಿಂದ 2021-22ರ ವರೆಗೆ ನೆಟ್ ವರ್ಕ್ ಪೂರೈಕೆದಾರ ಕಂಪನಿಗಳು ತಮ್ಮ ಆದಾಯ ವೃದ್ಧಿಯನ್ನು ಹೆಚ್ಚಿಸಲು ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಬಹುದು ಎನ್ನಲಾಗಿದೆ.ಕಳೆದ ವರ್ಷ ಕೂಡ ಕೆಲವು ನೆಟ್ ವರ್ಕ್ ಪ್ರೊವೈಡರ್ ಕಂಪನಿಗಳು ತಮ್ಮ ದರವನ್ನು ಹೆಚ್ಚಿಸಿದ್ದವು.ಮುಂಬರುವ ಎರಡು ವರ್ಷಗಳಲ್ಲಿ ಟೆಲಿಕಾಂ ವಲಯದ ಉದ್ಯಮದ ಆದಾಯವು ಶೇ.11 ರಿಂದ 13 ರಷ್ಟು ಮತ್ತು 2022ರ ಆರ್ಥಿಕ ವರ್ಷದಲ್ಲಿ ಸುಮಾರು 38% ಆಗಲಿದೆ ಎನ್ನಲಾಗಿದೆ.
ಮುಂಬರುವ ಎರಡು ವರ್ಷಗಳಲ್ಲಿ ಉದ್ಯಮದ ಆದಾಯವು ಶೇಕಡಾ 11 ರಿಂದ 13 ರಷ್ಟು ಮತ್ತು ಈ ಹಣಕಾಸು ವರ್ಷದಲ್ಲಿ ಇದು ಸುಮಾರು ಶೇಕಡಾ 38 ಕ್ಕಿಂತ ಹೆಚ್ಚಾಗುತ್ತದೆ ಎನ್ನಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಎಲ್ಲಾ ಕೈಗಾರಿಕಾ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಆದ್ರೆ ಟೆಲಿಕಾಂ ಉದ್ಯಮದ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರಲಿಲ್ಲ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಜನರು ಹೆಚ್ಚಿನ ಪ್ರಮಾಣದಲ್ಲಿ ಇಂಟರ್ನೆಟ್ ಬಳಕೆ ಮಾಡಿದ್ದನು ಇಲ್ಲಿ ನೆನಪಿಸಿಕೊಳ್ಳಬಹುದು.