ಕಾರು ಬಸ್ ಅಪಘಾತ ಪ್ರಕರಣ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮತ್ತೊರ್ವ ಸಿಬ್ಬಂದಿ ಸಾವು

Suddi Sante Desk

ಕಾರವಾರ –

ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮಹಿಳೆ ಸಾವಿಗೀಡಾದ ಘಟನೆ ಬೆನ್ನಲ್ಲೇ ಈಗ ಕಾರಿನಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತೊರ್ವ ಯುವತಿ ಸಾವಿಗೀಡಾಗಿದ್ದಾರೆ‌. ಕಾರವಾದ ಅಂಕೋಲಾ ಬಳಿ ಮೊನ್ನೆ ಅಪಘಾತ ನಡೆದಿತ್ತು‌. ಕಾರವಾರದ ಅಂಕೋಲಾದ ಬಳಿಯ ರಾಷ್ಟ್ರೀಯ ಹೆದ್ದಾರಿಯ 63 ರ ಮಾಸ್ತಿಕಟ್ಟಾ ಬಳಿ ಈ ಒಂದು ಅಪಘಾತ ನಡೆದಿತ್ತು.

ಸಾರಿಗೆ ಬಸ್ ಮತ್ತು ಬಸ್ ನಡುವೆ ಈ ಒಂದು ಅಪಘಾತವಾಗಿತ್ತು ಘಟನೆಯಲ್ಲಿ ಧಾರವಾಡದ ಕೃಷಿ ವಿವಿ ಯ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ರೇಖಾ ಎಂಬ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದರು‌.ಇನ್ನೂ ಒರ್ವ ಯುವತಿ ಸೇರಿ ಮೂವರಲ್ಲಿ ಒರ್ವ ಯುವತಿ ಸ್ಥಿತಿ ಗಂಭೀರವಾಗಿತ್ತು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ಮೇಘನಾ ಯುವತಿ ಸಾವಿಗೀಡಾಗಿದ್ದಾರೆ.

ಕುಲಪತಿಗಳ ಆಪ್ತ ಕಾರ್ಯದರ್ಶಿ ಮುಲ್ಲಾ ಅವರು ತಮ್ಮ ಕಾರಿನಲ್ಲಿ ಗೋವಾ ಗೆ ಹೋಗಿದ್ದರಂತೆ ಮರಳಿ ಬರುತ್ತಿರುವಾಗ ಈ ಒಂದು ಅಪಘಾತವಾಗಿತ್ತು ಅಪಘಾತದಲ್ಲಿ ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದ್ದು ತೀವ್ರವಾಗಿ ಗಾಯಗೊಂಡಿದ್ದ ಮೇಘನಾ ಇಂದು ಸಾವಿಗೀಡಾಗಿದ್ದಾಳೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಪೈಕಿ ಇಬ್ಬರು ಸಾವಿಗೀಡಾಗಿದಂತಾಗಿದ್ದು ಇನ್ನೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಕೋಲಾ ದಿಂದ ಧಾರವಾಡಗೆ ಕಾರು ಬರುತ್ತಿತ್ತು ಇನ್ನೂ ಗದಗದಿಂದ ಕಾರವಾರಕ್ಕೆ ಬಸ್ ಹೊರಟಿತ್ತು ಎರಡು ಡಿಕ್ಕಿಯಾಗಿವೆ.ಸಧ್ಯ ಕಾರಿನಲ್ಲಿರುವ ನಾಲ್ಕು ಜನರಲ್ಲಿ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದು ಚಾಲಕ ಮತ್ತು ಮುಲ್ಲಾ ಅವರು ಗಾಯಗೊಂಡು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಅಂಕೋಲಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.