ಹಿಮಾಚಲ ಪ್ರದೇಶ –
ದೇಶದಲ್ಲಿ ಒಂದೊಂದು ರಾಜ್ಯಗಳ ಹಳೆಯ ಪಿಂಚಣಿ ಯೋಜನೆ ಯನ್ನು ಮರು ಜಾರಿಗೆ ಮಾಡುತ್ತಿದ್ದು ಸಧ್ಯ ಇದಕ್ಕೆ ಹಿಮಾಚಲ ಪ್ರದೇಶ ರಾಜ್ಯವು ಕೂಡಾ ಸೇರಿಕೊಂಡಿದೆ.ಹೌದು ಈ ಒಂದು ರಾಜ್ಯದಲ್ಲೂ ಸಧ್ಯ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡಲಾಗಿದೆ
ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ನಮ್ಮ ರಾಜ್ಯದಲ್ಲಿ ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದರೂ ಈವರೆಗೆ ಯಾರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಕಾಟಾಚಾರಕ್ಕಾಗಿ ರಾಜ್ಯ ಸರ್ಕಾರ ಮಾತ್ರ ಸಮಿತಿ ರಚಿಸಿದೆ ಹೀಗಾಗಿ ಯಾವುದೇ ಪ್ರಯೋಜನ ವಾಗಿಲ್ಲ.
ಇದರ ಮಧ್ಯೆ ಕೆಲವೊಂದು ರಾಜ್ಯ ಸರ್ಕಾರಗಳು ತಾವು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆಯೇ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುತ್ತಿವೆ.
ಇದೀಗ ಹಿಮಾಚಲ ಪ್ರದೇಶ ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ನಿರ್ಧರಿಸಿ ಆದೇಶ ಮಾಡಿದ್ದು ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದೆ.
ಸುದ್ದಿ ಸಂತೆ ನ್ಯೂಸ್ ಹಿಮಾಚಲ ಪ್ರದೇಶ…..