ವಿಜಯಪುರ –
ಕೋವಿಡ್ ಮಹಾಮಾರಿಗೆ ಶಿಕ್ಷಕ ಸಂಘಟನೆಯ ಜಿಲ್ಲಾ ಸಂಘಟನೆಯ ಕಾರ್ಯದರ್ಶಿಯೊಬ್ಬರು ಬಲಿಯಾಗಿದ್ದಾರೆ.ಹೌದು ಕರ್ನಾಟಕ ರಾಜ್ಯ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ವಿಜಯ ಪುರದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಆರ್ ಎನ್ ಮುರಾಳ ಕರೋನಾ ಗೆ ಬಲಿಯಾಗಿದ್ದಾರೆ. ಆರ್ ಎನ್ ಮುರಾಳ ಅವರು ಸಿಂದಗಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಾಗದ್ದು ಇವರು ಎರಡು ಬಾರಿ ತಾಲೂಕಾ ಅಧ್ಯಕ್ಷರಾಗಿ ಒಂದು ಬಾರಿ ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ ಪ್ರಸ್ತುತ ಜಿಲ್ಲಾ ಸಂಘಟ ನಾ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ದಕ್ಷ,ಪ್ರಾಮಾಣಿಕ, ಸಂಘಟನಾ ಚತುರ,ಉತ್ತಮ ಹೋರಾಟಗಾರರಾಗದ್ದ ಇವರಿಗೆ ಒಂದು ವಾರದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು.ನಂತರ ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತ.ಚಿಕಿತ್ಸೆ ಫಲಿಸದೇ ಇವರು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿ ದ್ದಾರೆ.ಇನ್ನೂ ಇವರ ಒಂದು ಸಾವಿನಿಂದಾಗಿ ವಿಜಯ ಪುರ ಜಿಲ್ಲಾ ಸಂಘ ಮಹಾನ್ ನಾಯಕನನ್ನು ಸಂಘ ಟನಾ ಚತುರನನ್ನು ಕಳೆದುಕೊಂಡು ಅನಾಥವಾಗಿದೆ ಇನ್ನೂ ಇವರ ನಿಧನಕ್ಕೆ ವಿಜಯಪುರ ಜಿಲ್ಲೆಯ ಅಧ್ಯ ಕ್ಷರು ಸೇರಿದಂತೆ ಸರ್ವ ಸದಸ್ಯರು ಅಗಲಿದ ಮುರಾ ಳ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿ ದೇವರು ಅವರಿಗೆ ಚಿರ ಶಾಂತಿ ನೀಡಲಿ ಅವರ ಕುಟುಂಬಕ್ಕೆ ನೊವು ಸಹಿಸಿಕೊಳ್ಳುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.

ಇದರೊಂದಿಗೆ ಅದರಲ್ಲೂ ಶಿಕ್ಷಕ ಬಂಧುಗಳಾದ ಎಲ್ ಐ ಲಕ್ಕಮ್ಮನರ, ಶರಣಬಸವ ಬನ್ನಿ ಗೋಳ, ಹನುಮಂತ ಬುದಿಹಾಳ,ಜಯಶ್ರೀ ಬೆನ್ನಿ, ಜಗದೀಶ ಬೊಳಸೂರ,ಎಸ್ ಎಸ್ ಪಾಟೀಲ (ಚಡಚಣ) ಸುರೇಶ ಶೇಶಾಷ್ಯಾಲ್,S N ಪಡಶೆಟ್ಟಿ, ಬಸವರಾಜ ಸೊಂಪೂರ, ರಾಯಪ್ಪ ಇವಣಗಿ, ತಿಪ್ಪಣ್ಣ ಜಂಬಗಿ, ಆನಂದ ಕೆಂಬಾವಿ,ಆನಂದ ಭೂಸನೂರ,A B ದಾಡಕೆ,ಆರ್ ಎಮ್ ಮೇತ್ರಿ,ಕಿರಣ ರಘುಪತಿ, ಚಂದ್ರಶೇಖರ ಶೆಟ್ರು,ಉಮೇಶ ಕವಲಾಗಿ, ಅಶೋಕ ಸಜ್ಜನ,ಗಬ್ಬೂರ,ಗಿರಿಸಾಗರ, ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಂತಾ ಪವನ್ನು ಸೂಚಿಸಿದ್ದಾರೆ.