ಬೆಂಗಳೂರು –
ಕರೋನ ಮಹಾಮಾರಿಗೆ ರಾಜ್ಯದಲ್ಲೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ರಾಜಕೀಯ ಮಾಧ್ಯಮ ಸಾರ್ವಜನಿಕರು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ಸಾವು ನೋವು ಗಳು ಹೆಚ್ಚಾಗುತ್ತಿದ್ದು ಇದಕ್ಕೆ ಶಿಕ್ಷಕರು ಹೊರತಾಗಿಲ್ಲ ಹೌದು ಈವರೆಗೆ ರಾಜ್ಯದಲ್ಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಸಾವಿಗೀಡಾಗಿದ್ದು ಇಂದು ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕ ಬಲಿಯಾಗಿದ್ದಾರೆ.

ಹೌದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಟ್ಯಾಗೋರ್ ಮೆಮೊರಿಯಲ್ ಅನುದಾನಿತ ಶಾಲೆ ಯ ದೈಹಿಕ ಶಿಕ್ಷಕ ಮುರಳಿ ಅವರು ಕೋವಿಡ್ ಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಇವರಿಗೂ ಕೂಡಾ ಸೋಂಕು ಕಾಣಿಸಿಕೊಂಡಿತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಿಸದೇ ಶಿಕ್ಷಕ ಮುರಳಿ ಅವರು ನಿಧನರಾಗಿದ್ದಾರೆ

ಇನ್ನೂ ಚಿಕ್ಕ ವಯಸ್ಸಿನಲ್ಲೇ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕ ಮುರಳಿ ಅವರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.ಶಿಕ್ಷಕ ಬಂಧುಗಳಾದ ಆರ್ ನಾರಾಯ ಣಸ್ವಾಮಿ ಚಿಂತಾಮಣಿ,ಎಲ್ ಐ ಲಕ್ಕಮ್ಮನವರ, ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕ ರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ, ಗೋವಿಂದ ಜುಜಾರೆ ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾ ಯಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ,ಎಸ್ ಎಫ್, ಧನಿಗೊಂಡ, ಅಶೋ ಕ ಸಜ್ಜನ,ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಎಮ್ ಸೌಭಾಗ್ಯ, ಕೀರ್ತಿ ವತಿ ವಿ ಎನ್, ಜೆ ಟಿ ಮಂಜುಳಾ,ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ. ಮುಕಾಂಬಿಕಾ ಭಟ್.ನಾಗರತ್ನ, ಸೇರಿದಂತೆ ನಾಡಿನ ಶಿಕ್ಷಕ ಶಿಕ್ಷಕಿಯರು ಅಗಲಿದ ಶಿಕ್ಷಕನಿಗೆ ಸಂತಾಪ ಸೂಚಿಸಿದ್ದಾರೆ