ಬೆಂಗಳೂರು –
ವರ್ಗಾವಣೆಯಲ್ಲಿ ಸರಿಯಾಗಿ ಸಿಗದ ನ್ಯಾಯ ಅನ್ಯಾಯ ಬೇಸರದಿಂದ ಬೆಳ್ಳಂ ಬೆಳಿಗ್ಗೆ ಶಿಕ್ಷಕರೊಬ್ಬರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊರ್ವ ಶಿಕ್ಷಕ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಹೌದು ವರುಣ್ ಹೆಚ್ ಎಸ್ ಶಿಕ್ಷಕರು ಹಾಗೇ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಈ ಒಂದು ಹುದ್ದೇಗೆ ರಾಜೀನಾಮೆಯನ್ನು ನೀಡಿದ್ದಾರೆ.
ಈ ಕುರಿತಂತೆ ಸಂಘದ ಬಾಗೇಪಲ್ಲಿಯ ತಾಲ್ಲೂಕು ಅಧ್ಯಕ್ಷ ರಿಗೆ ಪತ್ರವನ್ನು ಬರೆದಿರುವ ಇವರು ವರ್ಗಾವಣೆಯ ವಿಚಾರದಲ್ಲಿ ತಮಗೆ ಆಗಿರುವ ನೋವಿನ ಕುರಿತಂತೆ ಸುಧೀರ್ಘವಾಗಿ ಉಲ್ಲೇಖವನ್ನು ಮಾಡಿ ಶಿಕ್ಷಕ ಸ್ನೇಹಿ ಅಲ್ಲದ ಈ ಒಂದು ವರ್ಗಾವಣೆಯಿಂದ ಬೇಸತ್ತು ಹಾಗೇ ಸಂಘದ ಸದಸ್ಯರ ಮೃದು ಧೋರಣೆಯಿಂದ ಬೇಸತ್ತು ಹುದ್ದೇಗೆ ಮತ್ತು ಸದಸ್ಯತ್ವಕ್ಕೆ ಈ ಕೂಡಲೇ ರಾಜೀನಾಮೆ ಯನ್ನು ನೀಡೊದಾಗಿ ಹೇಳಿದರು.
ಇದರೊಂದಿಗೆ ಸಂಘದ ನಾಯಕರ ವಿರುದ್ದವೇ ಅದೇ ಸಂಘದ ತಾಲ್ಲೂಕಿನ ಸದಸ್ಯರು ನಾಯಕರು ಸಿಡಿದೆದ್ದಿದ್ದು ಇನ್ನಾದರೂ ಈ ಒಂದು ಘಟನೆಯಿಂದ ಎಚ್ಚೇತ್ತುಕೊಳ್ಳು ತ್ತಾರೆನಾ ಅಥವಾ ಮೌನವಾಗಿರುತ್ತಾರೆನಾ ಎಂಬೊದನ್ನು ಕಾದು ನೋಡಬೇಕು.