ಬೆಂಗಳೂರು –

ಮಹಿಳೆಯರಿಗೆ 6 ತಿಂಗಳ ಶಿಶು ಪಾಲನಾ ಸರ್ಕಾರಿ ರಜೆಯ ಕುರಿತು ಸರ್ಕಾರಿ ಆದೇಶ ರಜೆ ಕುರಿತು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಿದೆ. ಈ ಒಂದು ವಿಚಾರ ಕುರಿತು ಸಂಘದ ಸರ್ವ ಸದಸ್ಯ ರ ಪರವಾಗಿ ಡಾ ಲತಾ ಮುಳ್ಳೂರ ಮತ್ತು ಜ್ಯೋತಿ ಹೆಚ್ ಅವರು ಧ್ವನಿ ಎತ್ತಿದ್ದರು.

ನಿರಂತರ ಹೋರಾಟ ಮನವಿ ಕೊನೆಗೂ ಸರ್ಕಾರ ಸ್ಪಂದಿಸಿ ಆದೇಶವನ್ನು ನೀಡಿದ್ದು ಇದನ್ನು ಮಾಡಿಸ ಲು ಸತತ ಪ್ರಯತ್ನ ದೊಂದಿಗೆ ಸರ್ಕಾರದ ಗಮನ ಸೆಳೆದು ಇಂದು ಮಹಿಳಾ ಸರ್ಕಾರಿ ನೌಕರರಿಗೆ ತುಂಬ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಸರ್ವ ಸದಸ್ಯ ರು ಸಂಘದ ಅಧ್ಯಕ್ಷರು ಸೇರಿದಂತೆ ಸರ್ವರಿಗೂ ಧನ್ಯವಾದಗಳನ್ನು ಹೇಳಿದ್ದಾರೆ

ಎಲ್ಲ ಮಹಿಳಾ ಶಿಕ್ಷಕಿಯರ ಧ್ವನಿಯಾಗಿ ಸತತ ಹೋರಾಟ ಮಾಡಿರುವ ಶ್ರೀಮತಿ ಡಾಕ್ಟರ್ ಲತಾ ಎಸ್ ಮುಳ್ಳೂರ್ ಹಾಗೂ ಇತರರಿಗೂ ತುಂಬು ಹೃದಯದ ಧನ್ಯವಾದಗಳನ್ನು ಹೇಳಿದ್ದಾರೆ





















