ಬೆಂಗಳೂರು –
ರಾಜ್ಯದಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ಶಿಕ್ಷಕರು ಕಂಗಾಲಾಗಿದ್ದಾರೆ.ಸಾಕಷ್ಟು ಪ್ರಮಾಣದಲ್ಲಿ ನಾಡಿನಲ್ಲಿ ಶಿಕ್ಷಕರು ಇದರಿಂದಾಗಿ ಸಾವಿಗೀಡಾಗಿದ್ದು ಇನ್ನೂ ಎಲ್ಲೆಡೆ ಆತಂಕ ಮನೆ ಮಾಡಿದೆ. ಇದರ ನಡುವೆ ಇನ್ನೂ ನಮ್ಮ ಶಿಕ್ಷಕರಿದ್ದು ಇತ್ತ ಇದರ ನಡುವೆ ಇಲಾಖೆ ಶಿಕ್ಷಕರಿಗೆ ಮತ್ತು ಶಾಲಾ ಸಿಬ್ಬಂದಿ ಗಳಿಗೆ ಜವಾಬ್ದಾರಿ ನೀಡಿದೆ.

ಹೌದು ಸಧ್ಯ ಇಲಾಖೆ ಶಿಕ್ಷಕರಿಗೆ ಮತ್ತು ಸಿಬ್ಬಂದಿ ಗಳಿಗೆ ರಜೆಯನ್ನು ನೀಡಿದ್ದು ಇತ್ತ ಇನ್ನೂ ಕೂಡಾ ರಜೆಯನ್ನು ನೀಡಲಾಗಿದ್ದು ಇದೆಲ್ಲದರ ನಡುವೆ ಈಗ ಇಲಾಖೆ ಶಾಲೆಯ ಪ್ರಧಾನ ಗುರುಗಳು,ಗುಮಾಸ್ತರು ಮತ್ತು ಇತರೆ ನೌಕರರು ಜೂನ್ 15 ಕ್ಕೆ ಕರ್ತವ್ಯಕ್ಕೆ ಹಾಜರಾಗಿ ದಾಖಲಾತಿ ಪ್ರಕ್ರಿಯೆ ಆರಂಭ ಮಾಡಬೇಕು ಹಾಗೂ ಮಧ್ಯಾಹ್ನದ ಉಪಹಾರ, ಯೋಜನೆಯ ಲಾರಿ ಬಂದಾಗ ಖುದ್ದಾಗಿ ಎದುರು ನಿಂತುಕೊಂಡು ತೂಕ ಮಾಡಿಸಿ ಆಹಾರ ಧಾನ್ಯಗಳ ನ್ನು ಪಡೆಯಲು ಆದೇಶವನ್ನು ಮಾಡಲಾಗಿದೆ

ಈಗಾಗಲೇ ಕೋವಿಡ್ ನಿಂದಾಗಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರನ್ನು ಇತರೆ ಸಿಬ್ಬಂದಿಗಳನ್ನು ಕಳೆದುಕೊಂಡಿದ್ದು ಇನ್ನೂ ಕೂಡಾ ಆತಂಕ ಮನೆ ಮಾಡಿದ್ದು ಇದರ ನಡುವೆ ಈಗ ಇಲಾಖೆ ಹೊಸದೊಂದು ಆದೇಶ ಮಾಡಿದ್ದು ಇದರಿಂದಾಗಿ ಶಿಕ್ಷಕರು ಆತಂಕಗೊಂಡಿದ್ದಾರೆ. ಇದು ಸರಿನಾ ಎಂಬ ಆತಂಕದ ಪ್ರಶ್ನೆಯನ್ನು ಕೇಳತಾ ಇದ್ದಾರೆ