ಸರ್ಕಾರಿ ಮಹಿಳಾ ಅಧಿಕಾರಿಯ ಹತ್ಯೆಗೆ ಹೊರಬಿತ್ತು ಸ್ಪೋಟಕ ವಿಚಾರ – ಅಧಿಕಾರಿಯನ್ನು ಹತ್ಯೆ ಮಾಡಿದ್ದಲ್ಲದೇ ಲಕ್ಷ ಲಕ್ಷ ರೂಪಾಯಿಯೊಂದಿಗೆ ಚಿನ್ನಾಭರಣ ದೋಚಿದ್ದ ಕಿರಣ್…..

Suddi Sante Desk
ಸರ್ಕಾರಿ ಮಹಿಳಾ ಅಧಿಕಾರಿಯ ಹತ್ಯೆಗೆ ಹೊರಬಿತ್ತು ಸ್ಪೋಟಕ ವಿಚಾರ – ಅಧಿಕಾರಿಯನ್ನು ಹತ್ಯೆ ಮಾಡಿದ್ದಲ್ಲದೇ ಲಕ್ಷ ಲಕ್ಷ ರೂಪಾಯಿಯೊಂದಿಗೆ ಚಿನ್ನಾಭರಣ ದೋಚಿದ್ದ ಕಿರಣ್…..

ಬೆಂಗಳೂರು

ಸರ್ಕಾರಿ ಮಹಿಳಾ ಅಧಿಕಾರಿಯ ಹತ್ಯೆಗೆ ಹೊರಬಿತ್ತು ಸ್ಪೋಟಕ ವಿಚಾರ – ಅಧಿಕಾರಿಯನ್ನು ಹತ್ಯೆ ಮಾಡಿದ್ದಲ್ಲದೇ ಲಕ್ಷ ಲಕ್ಷ ರೂಪಾಯಿಯೊಂ ದಿಗೆ ಚಿನ್ನಾಭರಣ ದೋಚಿದ್ದ ಕಿರಣ್

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಮಹಿಳಾ ಅಧಿಕಾರಿ ಕೆ ಎಸ್ ಪ್ರತಿಮಾ ಕೊಲೆಗೆ ಮತ್ತೊಂದು ಸ್ಟೋಟಕ ವಿಚಾರ ಬೆಳಕಿಗೆ ಬಂದಿದೆ ಹೌದು ಹಣ ಹಾಗೂ ಚಿನ್ನಾಭರಣಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಕೆ.ಎಸ್.ಪ್ರತಿಮಾ ಹತ್ಯೆ ನಡೆದಿದೆ ಎಂಬ ಸ್ಟೋಟಕ ವಿಚಾರ ಸಧ್ಯ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಕೆ.ಎಸ್.ಪ್ರತಿಮಾ (37)ಹತ್ಯೆ ಪ್ರಕರಣದ ಆರೋಪಿ ಕಿರಣ್ ಉದ್ದೇಶ ಪೂರ್ವಕವಾಗಿ ಸಂಚು ರೂಪಿಸಿ ಕೃತ್ಯ ಎಸಗಿರು ವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಆರಂಭಿಕ ತನಿಖೆಯಲ್ಲಿ ಕೆಲಸಕ್ಕೆ ಪುನಃ ನೇಮಿಸಿ ಕೊಳ್ಳಲು ಒಪ್ಪದಿದ್ದಾಗ ಕೋಪದಿಂದ ಕೃತ್ಯ ಎಸಗಿದ್ದೆ ಎಂದಿದ್ದ ಕಿರಣ್ ಸಂಚು ರೂಪಿಸಿ ಹತ್ಯೆಗೈದು ಬಳಿಕ ಮನೆಯಲ್ಲಿದ್ದ 5 ಲಕ್ಷ ನಗದು 4 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ್ದ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

ಕೃತ್ಯದ ಬಳಿಕ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಆರೋಪಿ ಕಿರಣ್‌ನನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರ ವಿಶೇಷ ತಂಡ ಬಂಧಿಸಿತ್ತು.ವಿಚಾರಣೆ ವೇಳೆ ಆರೋಪಿಯು ಕೆಲಸದಿಂದ ತೆಗೆದಿದ್ದಕ್ಕೆ ಕ್ಷಮಿಸಿ ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಿ ಎಂದಿದ್ದೆ ಅದಕ್ಕೆ ಅವರು ಒಪ್ಪದೇ ಇದ್ದಾಗ ಹತ್ಯೆಗೈದಿದ್ದೆ ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ ಎಂದಿದ್ದನು.ಅರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಬೇರೆಯದ್ದೇ ಕಥೆ ಬಯಲಾಗಿದೆ.

ಹಣ ಹಾಗೂ ಚಿನ್ನಾಭರಣ ದೋಚುವ ಉದ್ದೇಶ ದಿಂದ ಪ್ರತಿಮಾರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದನಂತೆ ಕಿರಣ್ ಮೊದಲು‌ ಹತ್ಯೆಗೈದು ನಂತರ ಪ್ರತಿಮಾರ ಕೈಯಲ್ಲಿದ್ದ ಎರಡು ಚಿನ್ನದ ಬಳೆ ಒಂದು ಬ್ರೇಸ್ ಲೈಟ್ ಹಾಗೂ ಮನೆಯಲ್ಲಿದ್ದ ನಗದು ದೋಚಿದ್ದನು.ಬಳಿಕ ಆ ಹಣ ಹಾಗೂ ಚಿನ್ನಾಭರಣವನ್ನು ಕೋಣನಕುಂಟೆಯ ನಿವಾಸಿ ಯಾಗಿದ್ದ ತನ್ನ ಗೆಳೆಯ ಶಿವು ಎಂಬಾತನಿಗೆ ನೀಡಿ ನನಗೆ ಯಾರೋ ಕೊಡಬೇಕಿತ್ತು ಸದ್ಯಕ್ಕೆ ಇದು ನಿಮ್ಮ ಮನೆಯಲ್ಲಿ ಇರಲಿ ನಾನು ಮಲೆ ಮಹದೇ ಶ್ವರ ಬೆಟ್ಟಕ್ಕೆ ಹೋಗಿ ಬಂದ ಬಳಿಕ ವಾಪಾಸ್ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದನಂತೆ

ಸದ್ಯ ಇನ್ಸ್ಪಕ್ಟರ್ ಜಗದೀಶ್ ನೇತೃತ್ವದ ತನಿಖೆ ಯಲ್ಲಿ ಆರೋಪಿ ಕಿರಣ್ ಈ ಎಲ್ಲಾ ವಿಚಾರಗ ಳನ್ನು ಬಾಯ್ಬಿಟ್ಟಿದ್ದಾನೆ. ಹಣ ಹಾಗೂ ಚಿನ್ನಾಭರ ಣವನ್ನು ಆರೋಪಿಯು ದೋಚಿದ್ದ ಎಂಬುದು ಬಯಲಾಗುತ್ತಿದ್ದಂತೆ ಆರೋಪಿಯ ಸ್ನೇಹಿತ ಶಿವುನನ್ನ ವಶಕ್ಕೆ ಪಡೆದು ಹೇಳಿಕೆ ದಾಖಲಿಸಿರುವ ಪೊಲೀಸರು ಆತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಐದು ಲಕ್ಷ ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.