ವಿಜಯಪುರ –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ನೌಕರರ ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಮತಗಟ್ಟೆ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸುವುದು.ಪ್ರಾಥಮಿಕ ಶಾಲಾ ಶಿಕ್ಷಕರಿಗೆ PRO,APRO ಎಂದು ನೇಮಿಸದೇ PO ನೇಮಿಸುವುದು.58 ವರ್ಷಕ್ಕೆ ಮೇಲ್ಪಟ್ಟ ನೌಕರರ ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯತಿ ನೀಡುವುದು.
ಚುನಾವಣಾ ಕರ್ತವ್ಯಕ್ಕೆ ತೆರಳುವ ನೌಕರರ ಸಿಬ್ಬಂದಿಗೆ ಸೂಕ್ತವಾದ ಕುಡಿಯುವ ನೀರು ಹಾಗೂ ತಂಗುವಾದ ವ್ಯವಸ್ಥೆಯನ್ನು ಮಾಡುವುದು.ಚುನಾವಣಾ ಕರ್ತವ್ಯ ನೇಮಕಗೊಂಡ ನೌಕರ ಸಿಬ್ಬಂದಿಗಳಿಗೆ ಅವರ ಮೂಲ ಸ್ಥಳಕ್ಕೆ ತೆರಳಲು ರಾತ್ರಿ ತೆರಳಲು ಸೂಕ್ತವಾದ ವಾಹನ ವ್ಯವಸ್ಥೆ ಮಾಡಲು ವಿನಂತಿಸುತ್ತೇವೆ.
ವಿಶೇಷವಾಗಿ ಅಂಗವಿಕಲ ನೌಕರರು ಒಂದು ವರ್ಷದ ಮಗುವನ್ನು ಹೊಂದಿದ ಹಾಗೂ ಗರ್ಭಿಣಿ ಮಹಿಳಾ ನೌಕರ ಸಿಬ್ಬಂದಿಗೆ ವಿನಾಯಕ ನೀಡುವುದು.ಗಂಭೀರ ಸ್ವರೂಪದ ಕ್ಯಾನ್ಸರ್ ಹೃದಯ ಸಂಬಂಧಿ ಹಾಗೂ ಡಯಾಲಿಸಿಸ್ ಇತ್ಯಾದಿ ಕಾಯಿಲೆಯುಳ್ಳ ನೌಕರರ ಸಿಬ್ಬಂದಿ ಯವರಿಗೆ ವಿನಾಯತಿ ನೀಡುವಂತೆ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಮನವಿ ಸಲ್ಲಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಸುರೇಶ ಶಡಶ್ಯಾಳ ಖಜಾಂಚಿ ಜುಬೇರ ಕೆರೂರ ಕಾರ್ಯ ದರ್ಶಿ ರಾಜಶೇಖರ ದೈವವಾಡಿ ವಿಜಯಕುಮಾರ ಹತ್ತಿ ಗಂಗಾಧರ ಜೇವೂರ ರಾಮಕೃಷ್ಣ ಬಸವ ರಾಜ ಗಿರಿನಿವಾಸ ಮಂಜುನಾಥ ಆರೇಶಂಕರ ಶ್ರೀಶೈಲ ಸೋಲಾಪುರ ಮಾನಪ್ಪ ಪತ್ತಾರ ಇತರರು ಇದ್ದರು.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..