ರಾಯಚೂರು –
ಕನ್ನಡ ನಾಡಿನಲ್ಲಿ ವೈಜ್ಞಾನಿಕತೆ, ವೈಚಾರಿಕತೆಯ ವಿಷಯ ವಾಗಿ ಪವಾಡ ಬಯಲು ಕಾರ್ಯಕ್ರಮ, ಮೂಢನಂಬಿಕೆ ಗಳನ್ನು ತೊಲಗಿಸುವ ನಿಟ್ಟಿನಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಬೆಂಗಳೂರು ಸಂಸ್ಥೆಯು”ಎಚ್ ಎನ್ ಪ್ರಶಸ್ತಿಯನ್ನು ” ಈ ವರ್ಷದಿಂದ ನೀಡುತ್ತಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸ ಬಹುದು ಎಂದು ಸಂಸ್ಥೆ ಹೇಳಿದೆ
-:ನಿಯಮಗಳು:-
▪️50 ವರ್ಷ ಮೇಲ್ಪಟ್ಟವರಾಗಿರಬೇಕು.
▪️ನಾಡಿನಾದ್ಯಂತ ವೈಚಾರಿಕತೆ, ವೈಜ್ಞಾನಿಕತೆಯ ಉಪನ್ಯಾಸ ನೀಡಿರುವ, ಪವಾಡ ಬಯಲು ಕಾರ್ಯಕ್ರಮ ಮಾಡಿರುವ ದಾಖಲೆ, ಪತ್ರಿಕಾ ವರದಿಗಳನ್ನು ಅರ್ಜಿಯ ಜೊತೆ ನೀಡಬೇಕು.
▪️ಶಾಲೆಗಳಲ್ಲಿ, ಇನ್ನಿತರ ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡಿರುವ ಫೋಟೋ ಮತ್ತು ವರದಿ ನೀಡಬೇಕು.
▪️ಬೇರೆ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿದ್ದರೆ ಅದರ ಮಾಹಿತಿ ನೀಡಬೇಕು.
▪️ಕನ್ನಡ ನಾಡು ನುಡಿಗೆ ತನ್ನದೇ ಆದ ಸೇವೆ ಸಲ್ಲಿಸುತ್ತಿರಬೇಕು.
▪️ರಾಜಕೀಯ ಮತ್ತು ಅಪರಾಧ ಹಿನ್ನಲೆ ಇರಬಾರದು.
▪️ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕು.
▪️ಪರಿಷತ್ತಿನ ಪದಾಧಿಕಾರಿ ಆಗಿರಬಾರದು, ಪರಿಷತ್ತಿನ ಸದಸ್ಯರು ಆಗಿರಬಹುದು.
ಆಸಕ್ತರು ತಮ್ಮ ಅರ್ಜಿಗಳನ್ನು 2021 ನವೆಂಬರ್ – 5 ರೊಳಗೆ ಆಯಾ ತಾಲೂಕಿನ
ಅಧ್ಯಕ್ಷರುಗಳಿಗೆ ಅಥವಾ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು.
ರಾಯಚೂರು -9483072474
ದೇವದುರ್ಗ – 9008437801
ಸಿರವಾರ – 9611333716
ಮಾನ್ವಿ – 9663751236
ಮಸ್ಕಿ – 7996769881
ಸಿಂಧನೂರು – 9663480160,9845484624,
ಲಿಂಗಸಗೂರು -9972209359
ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
-ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಯಚೂರು ಜಿಲ್ಲಾ ಘಟಕ
ವರದಿ – ಶರಣಬಸವ ಬನ್ನಿಗೋಳ ಶಿಕ್ಷಕರು