ಬೆಂಗಳೂರು –
ಈಗಾಗಲೇ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಕಲಿಕೆಗೆ ಯಾವುದೇ ತೊಂದರೆ ಆಗದಂತೆ ಶಿಕ್ಷಕರ ಕೊರತೆ ದೃಷ್ಟಿಯಿಂದ ಮೊದಲ ಹಂತದಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಲಾಗಿದೆ.ಇದರ ಬೆನ್ನಲ್ಲೇ ಈಗ ಮತ್ತೊಂದು ಹಂತದಲ್ಲಿ 4000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ
ಹೌದು ಎರಡನೇಯ ಹಂತದಲ್ಲಿ ಈ ಒಂದು ಕುರಿತು ತೀರ್ಮಾನಿಸಿದ್ದು 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಿ ಕೊಳ್ಳುವ ಪ್ರಕ್ರಿಯೆ ವಿಳಂಬ ಕಾರಣದಿಂದ ಶಿಕ್ಷಕರ ಕೊರತೆ ನೀಗಿಸಲು 4 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲಾಗುತ್ತಿದೆ.
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳಲಾಗಿದೆ.ಮೊದಲ ಹಂತ ದಲ್ಲಿ 18000 ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳ ಲಾಗುತ್ತದೆ.ಸದ್ಯ 4000 ಹೆಚ್ಚುವರಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಅನುಮೋದನೆ ನೀಡಿ ಅರ್ಜಿ ಯನ್ನು ಆಹ್ವಾನ ಮಾಡಲಾಗಿದೆ.