ಚಿತ್ರದುರ್ಗ –
ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸ ಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ ಇಂತಿದೆ.
ವಾಣಿಜ್ಯಶಾಸ್ತ್ರ 06 ಹುದ್ದೆ (ಎಂ.ಕಾಂ ವಿದ್ಯಾರ್ಹತೆ), ಕನ್ನಡ 01 ಹುದ್ದೆ (ಎಂ.ಎ ಕನ್ನಡ), ಇತಿಹಾಸ 01 ಹುದ್ದೆ (ಎಂ.ಎ ಇತಿಹಾಸ), ಭಾರತದ ಸಂವಿಧಾನ 01 ಹುದ್ದೆ (ಎಂ.ಎ ರಾಜ್ಯಶಾಸ್ತ್ರ), ಪರಿಸರ ವಿಜ್ಞಾನ 01 ಹುದ್ದೆ (ಎಂ.ಎಸ್ಸಿ ಸಸ್ಯಶಾಸ್ತ್ರ/ಲೈಪ್ ಸೈನ್ಸ್).
ಆಸಕ್ತ ಅರ್ಹ ಅಭ್ಯರ್ಥಿಗಳು ಜೂನ್ 16ರೊಳಗೆ ಕಾಲೇಜಿನ ಇ-ಮೇಲ್ ವಿಳಾಸ [email protected] ಮೂಲಕ ಸಲ್ಲಿಸಬಹುದಾಗಿದೆ. ಪಿಹೆಚ್‍ಡಿ, ನೆಟ್, ಕೆಸೆಟ್ ಹಾಗೂ ಸೇವಾನುಭವ ಆದವರಿಗೆ ಮೊದಲ ಆದ್ಯತೆ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ
ಪ್ರಾಂಶುಪಾಲರು- 9448423351, ಮುಖ್ಯಸ್ಥರು-9901842421, 9980762851 ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.