ಹೊಸದಿಲ್ಲಿ –
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ.ಯು.ಯು.ಲಲಿತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶ (ಸಿಜೆಐ)ರಾಗಿ ನೇಮಕಗೊಳಿಸಿದ್ದಾರೆ.ಹಾಲಿ ಸಿಜೆಐ ಎನ್.ವಿ.ರಮಣ ಅವರು ಆ.26ರಂದು ನಿವೃತ್ತರಾಗಲಿದ್ದು ಹೀಗಾಗಿ ನ್ಯಾ. ಲಲಿತ್ ಅವರು ಆ.27ರಂದು ಅಧಿಕಾರ ವಹಿಸಿಕೊಳ್ಳಲಿ ದ್ದಾರೆ.ನ್ಯಾ.ಲಲಿತ ಅವರು ಸಿಜೆ ಐ ಹುದ್ದೆಗೇರಲಿರುವ 49ನೇ ವ್ಯಕ್ತಿಯಾಗಿದ್ದಾರೆ ಆದರೆ ನವಂಬರ್ 8ರಂದು ನಿವೃತ್ತರಾಗುವುದರಿಂದ ಅವರ ಅಧಿಕಾರಾವಧಿಯು ಸಂಕ್ಷಿಪ್ತವಾಗಿರಲಿದೆ.ಅವರ ನಂತರ ಭಾರತದ ಮುಖ್ಯ ನ್ಯಾಯಾಧೀಶರಾಗಲು ನ್ಯಾ.ಡಿ.ವೈ.ಚಂದ್ರಚೂಡ ಅವರು ಅಗ್ರಸ್ಥಾನದಲ್ಲಿದ್ದಾರೆ.ಅವರು ಈ ಹುದ್ದೆಗೇರಿದರೆಸುಮಾರು ಎರಡು ವರ್ಷಗಳ ಅಧಿಕಾರಾವಧಿಯನ್ನು ಪಡೆಯಲಿದ್ದಾರೆ
ನ್ಯಾ.ಎನ್.ವಿ.ರಮಣ ಅವರು ಆ.4ರಂದು ತನ್ನ ಉತ್ತರಾ ಧಿಕಾರಿಯಾಗಿ ನ್ಯಾ.ಲಲಿತ ಅವರ ಹೆಸರನ್ನು ಶಿಫಾರಸು ಮಾಡಿದ್ದರು.ನ್ಯಾ.ರಮಣ ನಂತರ ನ್ಯಾ.ಲಲಿತ ಅವರು ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾ ಧೀಶರಾಗಿದ್ದಾರೆ.ನ್ಯಾ.ಲಲಿತ್ ಅವರು 2014,ಆ.13ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಗೊಂಡಿದ್ದರು.ಅದಕ್ಕೂ ಮುನ್ನ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿದ್ದರು.