ಬೆಂಗಳೂರು –
ಒಂದು ಕಡೆ ಈಗಾಗಲೇ ಶೈಕ್ಷಣಿಕ ವರ್ಷ ಆರಂಭ ಗೊಂಡಿದ್ದು ಇನ್ನೂ ಶಾಲೆಗಳು ಕೂಡಾ ಪ್ರಾರಂಭ ವಾಗಿದ್ದು ಇನ್ನೂ ಮತ್ತೊಂದೆಡೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಿದ್ದತೆ ಇದರ ನಡುವೆ ಶಿಕ್ಷಕರ ವರ್ಗಾ ವಣೆ ಇನ್ನೂ ಮತ್ತೊಂದೆಡೆ ಒಂದನೇಯ ಅಲೆಗಿಂತ ಎರಡನೇಯ ಅಲೆಯಲ್ಲಿ ಶಿಕ್ಷಕರು ಹೆಚ್ಚಿನ ಪ್ರಮಾಣ ದಲ್ಲಿ ಸಾವಿಗೀಡಾಗಿದ್ದು ಇನ್ನೂ ಈಗಾಗಲೇ ನಾಡಿನಾ ದ್ಯಂತ ಶಿಕ್ಷಕರು ಇನ್ನೂ ಕೂಡಾ ಭಯದಲ್ಲಿದ್ದು ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನ್ ಸಿಕ್ಕಿಲ್ಲ.

ಇದನ್ನೇಲ್ಲವನ್ನು ಅರಿತ ಶಿಕ್ಷಣ ಸಚಿವರು ಕೂಡಲೇ ಕೋವಿಡ್ ಕರ್ತವ್ಯದಲ್ಲಿದ್ದ ಶಿಕ್ಷಕರನ್ನು ಬಿಡುಗಡೆ ಮಾಡುವಂತೆ ಸೂಚನೆಯನ್ನು ಮಾಡಿ ಆದೇಶವನ್ನು ಮಾಡಿದ್ದಾರೆ. ಹೀಗಿರುವಾಗ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಕರ್ತವ್ಯಕ್ಕಾಗಿ ಶಿಕ್ಷಕರನ್ನು ಮತ್ತೆ ನೇಮಕ ಮಾಡಲಾಗಿದೆ. ಮೂರನೇಯ ಅಲೆ ಯೊಂದಿಗೆ ಡೆಲ್ಟಾ ವೈರಸ್ ನ್ನು ತಡೆಗಟ್ಟುವ ಉದ್ದೇಶ ದಿಂದ ಬೇರೆ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಬರುತ್ತಿದ್ದು ಇವರನ್ನು ಪರಿಶೀಲನೆ ಮಾಡಲು ಹಾಗೇ ತಡೆಗಟ್ಟುವ ಒಂದು ಉದ್ದೇಶದಿಂ ದಾಗಿ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಚೇಕ್ ಪೊಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ.



ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಕರ್ತವ್ಯವನ್ನು ಮಾಡಲು ಜಿಲ್ಲೆಯ 11 ಶಿಕ್ಷಕರನ್ನು ನೇಮಕ ಮಾಡಲಾಗಿದ್ದು ಇದರಿಂದಾಗಿ ಶಿಕ್ಷಕರು ಆತಂಕಗೊಂಡಿದ್ದಾರೆ. ಈಗಾ ಗಲೇ ಎರಡನೇಯ ಅಲೆಯಲ್ಲಿ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಸಾವಿಗೀಡಾಗಿದ್ದ ಇದರಿಂದ ಇನ್ನೂ ಕೂಡಾ ಶಿಕ್ಷಕರು ಹೊರಬಂದಿಲ್ಲ ಹೀಗಿರುವಾಗ ಮತ್ತೆ ಇವರನ್ನು ಕೋವಿಡ್ ಡೂಟಿಗಾಗಿ ವಿಜಯಪುರ ಜಿಲ್ಲಾಧಿಕಾರಿ ಅವರು ಶಿಕ್ಷಣ ಸಚಿವರ ಆದೇಶವನ್ನು ಮೀರಿ ಸಧ್ಯ ಮತ್ತೆ ಶಿಕ್ಷಕರನ್ನು ಚೇಕ್ ಪೊಸ್ಟ್ ಗಳಲ್ಲಿ ನೇಮಕ ಮಾಡಿದ್ದಾರೆ.


ಈ ಒಂದು ನೇಮಕಾತಿಯಿಂದಾಗಿ ಜಿಲ್ಲೆಯಲ್ಲಿನ ಶಿಕ್ಷಕರು ಮತ್ತೆ ಆತಂಕಗೊಂಡಿದ್ದಾರೆ.ಇನ್ನೂ ಇದನ್ನೇ ಲ್ಲವನ್ನು ಪ್ರಶ್ನೆ ಮಾಡಬೇಕಾದ ಶಿಕ್ಷಕ ಸಂಘಟನೆಯ ನಾಯಕರು ಮೌನವಾಗಿದ್ದಾರೆ. ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡುತ್ತಿರುವ ಸಂಘಟನೆಯ ನಾಯ ಕರೇ ಈಗಲಾದರೂ ಶಿಕ್ಷಕರಿಗೆ ನೆರವಾಗಿ ಧ್ವನಿ ಎತ್ತಿ ಮತ್ತೆ ಕೋವಿಡ್ ಡೂಟಿಗಾಗಿ ನೇಮಕ ಮಾಡಿದ್ದನ್ನು ಕೂಡಲೇ ರಾಜ್ಯ ಮಟ್ಟದಲ್ಲಿ ಮಾತನಾಡಿ ಮುಕ್ತಿ ನೀಡಿ ಆತಂಕದಲ್ಲಿರುವ ಶಿಕ್ಷಕರಿಗೆ ನೆಮ್ಮದಿಯನ್ನು ನೀಡಿ ಇಲ್ಲವಾದರೆ ಮತ್ತೊಂದು ಸಮಸ್ಯೆ ಇಲಾಖೆ ಯಲ್ಲಿ ಆರಂಭವಾಗೊದಂತು ನಿಜ.

ಇನ್ನೂ ಈ ಒಂದು ವಿಚಾರ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಅವರನ್ನು ಸುದ್ದಿ ಸಂತೆ ಟೀಮ್ ಪ್ರಶ್ನೆ ಮಾಡಿದಾಗ ಈ ಒಂದು ವಿಚಾರ ನಿಮ್ಮಿಂದ ಗಮನಕ್ಕೆ ಬಂದಿದ್ದು ಸಮಸ್ಯೆಯನ್ನು ಸರಿ ಪಡಿಸುವ ಮಾತನ್ನು ಹೇಳಿದರು.