ಬೆಂಗಳೂರು –
ಕೊರೊನಾ ಅವಾಂತರಗಳು ಒಂದೆರಡಲ್ಲ.ದೇಶದ ಆರ್ಥಿಕತೆಯಿಂದ ಹಿಡಿದು ತರಗತಿಯಲ್ಲಿ ಕೂತು ಅಕ್ಷರ ತಿದ್ದುವ ಮಗುವನ್ನೂ ಕೂಡ ಅದು ಬಾಧಿಸಿದೆ. ಆ 2 ವರ್ಷಗಳಲ್ಲಿ ಮಗು ಶಾಲೆಗೆ ಆಗಾಗ ಬರುವ ಅತಿಥಿ ಯಾದದ್ದೆ ಹೆಚ್ಚು.ಕೊರೊನಾದ ಕಬಂಧದ ನಡುವೆಯೂ ಮಗುವಿಗೆ ಕಲಿಸಲು ಶಿಕ್ಷಕರು ತೆಗೆದುಕೊಂಡ ಕಾಳಜಿ ಮತ್ತು ಅಪಾಯಗಳನ್ನು ನಾವು ನೆನೆಯಲೇಬೇಕು.ಅದೇ ಕಾರಣಕ್ಕೆ ಸೋಂಕು ಅಂಟಿಸಿಕೊಂಡು ಸತ್ತು ಹೋದ ಮೇಷ್ಟ್ರುಗಳ ಲೆಕ್ಕವೂ ಇನ್ನೂ ನಿಖರವಾಗಿ ಸಿಕ್ಕಿಲ್ಲ.
ಎಲ್ಲರ ಕಾಳಜಿ ಒಂದೇ ಆಗಿತ್ತು.ಮಗು ಕಲಿಯಬೇಕು. ಮಗು ವಿನ ಕಲಿಕೆಗೆ ಹಿನ್ನಡೆಯಾಗಬಾರದು.ಮಗು ಕಲಿ ತದ್ದನ್ನು ಮರೆಯಬಾರದು.ಅದಕ್ಕಾಗಿಯೇ ಹತ್ತಾರು ಮಾಧ್ಯಮಗಳ ಮೂಲಕ ಮಕ್ಕಳನ್ನು ತಲುಪುವ ಪ್ರಯ ತ್ನವಾಯಿತು.ಕೊರೊನಾ ಭಾಗಶಃ ಇಳಿದುಹೋದ ಈ ಹೊತ್ತಿನಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಮತ್ತಷ್ಟು ನಿಗಾವ ಹಿಸಬೇಕಾದ ತುರ್ತಿದೆ.ಅದಕ್ಕಾಗಿ ಇಲಾಖೆ ಹಬ್ಬದಂತೆ “ಕಲಿಕಾ ಚೇತರಿಕೆ’ ಎಂಬ ಕಾರ್ಯಕ್ರಮವನ್ನು ಬಹಳ ಹುರುಪಿನಲ್ಲಿ ಜಾರಿಗೊಳಿಸಲು ಹೊರಟಿದೆ.2 ವರ್ಷಗಳ ಹಿನ್ನಡೆ ತುಂಬುವುದು ಹೇಗೆ ಎನ್ನುವುದನ್ನು ಈಗ ಕಲಿಕಾ ಚೇತರಿಕೆ ಮೂಲಕ ಆ ಒಂದು ಕಾರ್ಯವನ್ನು ಮಾಡುತ್ತಿದೆ