ಶಿಕ್ಷಣಕ್ಕಾಗಿ ನಮಗೆ ಬಸ್ ವ್ಯವಸ್ಥೆ ಮಾಡಿ CM ಗೆ ಪತ್ರ ಬರೆದ ವಿದ್ಯಾರ್ಥಿನಿ – ಬಸ್ ಸಂಚಾರ ವ್ಯವಸ್ಥೆಯೊಂದಿಗೆ  ಶಿಕ್ಷಣಕ್ಕಾಗಿ ಧ್ವನಿ ಎತ್ತಿ ರಾಜ್ಯದ ಗಮನ ಸೆಳೆದ ಹರ್ಷಿಣಿ…..

Suddi Sante Desk
ಶಿಕ್ಷಣಕ್ಕಾಗಿ ನಮಗೆ ಬಸ್ ವ್ಯವಸ್ಥೆ ಮಾಡಿ CM ಗೆ ಪತ್ರ ಬರೆದ ವಿದ್ಯಾರ್ಥಿನಿ – ಬಸ್ ಸಂಚಾರ ವ್ಯವಸ್ಥೆಯೊಂದಿಗೆ  ಶಿಕ್ಷಣಕ್ಕಾಗಿ ಧ್ವನಿ ಎತ್ತಿ ರಾಜ್ಯದ ಗಮನ ಸೆಳೆದ ಹರ್ಷಿಣಿ…..

ಬೆಂಗಳೂರು

ಶಿಕ್ಷಣಕ್ಕಾಗಿ ನಮಗೆ ಬಸ್ ವ್ಯವಸ್ಥೆ ಮಾಡಿ CM ಗೆ ಪತ್ರ ಬರೆದ ವಿದ್ಯಾರ್ಥಿನಿ – ಬಸ್ ಸಂಚಾರ ವ್ಯವಸ್ಥೆಯೊಂದಿಗೆ  ಶಿಕ್ಷಣಕ್ಕಾಗಿ ಧ್ವನಿ ಎತ್ತಿ ರಾಜ್ಯದ ಗಮನ ಸೆಳೆದ ಹರ್ಷಿಣಿ

ಹೌದು ಶಿಕ್ಷಣಕ್ಕಾಗಿ ನಮಗೆ ಬಸ್ ವ್ಯವಸ್ಥೆ ಮಾಡಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು 8ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಮುಖ್ಯಮಂತ್ರಿ ಯವರಿಗೆ ಪತ್ರವನ್ನು ಬರೆದಿದ್ದಾರೆ.ನಮಗೆ ದೇವಾಲ ಯದ ತೀರ್ಥಪ್ರಸಾದ ಬೇಡ, ಶಿಕ್ಷಣ ಕ್ಕಾಗಿ ಬಸ್ ವ್ಯವಸ್ಥೆ ಮಾಡಿ ಎನ್ನುತ್ತಾ ಸಿಎಂಗೆ ಪತ್ರ ಬರೆದು ರಾಜ್ಯದ ಗಮನ ಸೆಳೆದಿದ್ದಾಳೆ

8 ತರಗತಿ ವಿದ್ಯಾರ್ಥಿನಿ ಹರ್ಷಿಣಿ.ನಮಗೆ ಉನ್ನತ ಶಿಕ್ಷಣಕ್ಕಾಗಿ ಸಾರಿಗೆ ಬಸ್‌ ಗಳನ್ನು ವ್ಯವಸ್ಥೆ ಮಾಡಿ ತಾವರೆಕೆರೆ ವ್ಯಾಪ್ತಿಯ ಸೀಗೇಹಳ್ಳಿಯಿಂದ ಬೆಂಗಳೂರಿನ ಹೋಗಲು ಸರಿಯಾದ ಸಾರಿಗೆ ಬಸ್‌ ವ್ಯವಸ್ಥೆ ಇಲ್ಲ.ಹೀಗಾಗಿ ನಮಗೆ ಬಸ್‌ ವ್ಯವಸ್ಥೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಚಿವ ರಾಮಲಿಂಗ ರೆಡ್ಡಿ, ಮಧು ಬಂಗಾರಪ್ಪಗೂ ಪತ್ರ ಬರೆದು ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.

ವಿದ್ಯಾರ್ಥಿನಿಯು ಪತ್ರದಲ್ಲಿ,ನಾನು ಕುಮಾರಿ ವಿ.ವೈ. ಹರ್ಷಿಣಿ, 8 ನೇ ತರಗತಿ ವಿದ್ಯಾರ್ಥಿನಿ. ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇ ನೆಂದರೆ ನಾನು ಮತ್ತು ನನ್ನ ತಾಯಿ ಹಲವು ಬಾರಿ ತಮ್ಮ ಸಂಸ್ಥೆಯ ಅಧಿಕಾರಿಗಳಿಗೆ ತಾವರೆಕೆರೆ ಯಿಂದ ಮಾಗಡಿ ರಸ್ತೆಯ ಮುಖಾಂತರ ಶ್ರೀನಗರ ಬಸ್ ನಿಲ್ದಾಣಕ್ಕೆ ಸಾರಿಗೆ ಸಂಸ್ಥೆಯ ಬಸ್ ಬಿಡಬೇ ಕೆಂದು ಮನವಿ ಮಾಡಿಕೊಂಡಿರುತ್ತೇವೆ.

ಈ ಪತ್ರಕ್ಕೆ ಸಂಸ್ಥೆಯ ಅಧಿಕಾರಿಗಳು ಯಾವುದೇ ಉತ್ತರವನ್ನು ನೀಡಿರುವುದಿಲ್ಲ.ಆದರೆ ಪ್ರತಿ ಗುರುವಾರ ಹಾಗೂ ಭಾನುವಾರ ಸುಮ್ಮನಹಳ್ಳಿ ಯಿಂದ ಕಡಬಗೆರೆ ಮಾರ್ಗವಾಗಿ ರಾಯರ ಕಾಮದೇನು ದೇವಾಲಯಕ್ಕೆ ಪ್ರತಿಗಂಟೆಗೆ ಬಸ್ ಬಿಡಲಾಗುತ್ತಿದೆ.ನಮಗೆ ದೇವಾಲಯದ ತೀರ್ಥ ಪ್ರಸಾದ ಬೇಡ, ನಮಗೆ ಉನ್ನತ ಶಿಕ್ಷಣಕ್ಕಾಗಿ ಸಂಸ್ಥೆಯ ಸಾರಿಗೆ ವಾಹನಗಳು ಬೇಕಾಗಿರುತ್ತದೆ.

ಈ ದೇಶದ ರಾಷ್ಟ್ರಪತಿ ಮಹಿಳೆಯಾಗಿರುತ್ತಾರೆ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸುರಕ್ಷಿತ ಸಿಗುವಂತೆ ಮಾಡಿರು ವುದು ಬಾಬಾಸಾಹೇಬ್ .ಬಿ.ಆರ್.ಅಂಬೇಡ್ಕರ್ ಅವರ ಆಶೀರ್ವಾದವಾಗಿರುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಪ್ರತಿ ಜಿಲ್ಲೆ ಮತ್ತು ತಾಲೂಕು ಹಳ್ಳಿಯ ಶಾಲಾ ಮಕ್ಕಳಿಗೆ ವಿಶೇಷ ಸಾರಿಗೆ ಬಸ್​ಗಳನ್ನು ಆರಂಭಿಸಬೇಕಾಗಿ ತಮ್ಮಲ್ಲಿ ಕಳಕಳಿಯವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹರ್ಷಿಣಿ ಪತ್ರದಲ್ಲಿ ಬರೆದಿದ್ದಾಳೆ.

ಸಧ್ಯ ವಿದ್ಯಾರ್ಥಿನಿ ಪತ್ರವನ್ನ ಬರೆದಿದ್ದು ಇದಕ್ಕೆ ಮುಖ್ಯಮಂತ್ರಿಯವರು ಸಾರಿಗೆ ಸಚಿವರು ಶಿಕ್ಷಣ ಸಚಿವರು ಸೇರಿದಂತೆ ಪತ್ರವನ್ನು ಸ್ವೀಕಾರ ಮಾಡಿ ದವರು ಹೇಗೆ ಉತ್ತರಿಸುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.