ಸಿಂದಗಿ –
ಮೇಲಾಧಿಕಾರಿಗಳ ಕಿರುಕುಳ ಸಹಿಸದೇ ಆತ್ಮ ಹತ್ಯೆ ಮಾಡಿಕೊಂಡ ಮುಖ್ಯಶಿಕ್ಷಕನ ಸಾವಿಗೆ ನ್ಯಾಯವನ್ನು ದೊರಕಿಸಿಕೊಡುವಂತೆ ಒತ್ತಾಯ ಕೇಳಿ ಬಂದಿದೆ.ಸಿಂದಗಿ ತಾಲ್ಲೂಕಿನ ಸಾಸಾಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಮಲ್ಲಪ್ಪ ನಾಯಕಲ್ (54) ಅವರ ಸ್ವಗ್ರಾಮ ಕೋರವಾರದ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಇಲ್ಲಿಯ ತಾಲ್ಲೂಕು ಆಡಳಿತ ಸೌಧದ ಎದುರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಬಿಇಒ ಒಳಗೊಂಡಂತೆ ಐದು ಜನರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯವನ್ನು ಮಾಡಿದರು.
ಶಿಕ್ಷಕನ ಆತ್ಮಹತ್ಯೆ ವಿಷಯ ಎಲ್ಲಡೆ ಹಬ್ಬಿ ಅಪಾರ ಸಂಖ್ಯೆಯಲ್ಲಿ ತಾಲ್ಲೂಕಿನ ಶಿಕ್ಷಕರು ಕೋರವಾರ ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆಗೆ ಧಾವಿಸಿದರು.ಶವ ಪರೀಕ್ಷೆ ಮುಗಿಯುತ್ತಿದ್ದಂತೆ ಕೋರವಾರ ಗ್ರಾಮ ಸ್ಥರು ಶವವನ್ನು ವಾಹನದ ಮೇಲೆ ಹಾಕಿಕೊಂಡು ಪ್ರತಿಭಟನಾ ಮೂಲಕ ಡಾ.ಅಂಬೇಡ್ಕರ್ ವೃತ್ತ ದಲ್ಲಿ ಕೆಲ ಕಾಲ ಧರಣಿ ನಡೆಸಿದರು. ಮೆರವಣಿಗೆ ಮಾರ್ಗ ಮಧ್ಯದಲ್ಲಿ ಬಿಇಓ ವಿರುದ್ದ ಘೋಷಣೆಗ ಳನ್ನು ಕೂಗಿದರು.
ನೇರವಾಗಿ ತಾಲ್ಲೂಕು ಆಡಳಿತ ಸೌಧ ತಲುಪಿದ ಪ್ರತಿಭಟನಾ ಮೆರವಣಿಗೆ ಅಲ್ಲಿ ಪ್ರತಿಭಟನಾ ಸಭೆಯಾಗಿ ಮಾರ್ಪಾಡಾಯಿತು.ವಿವಿಧ ಸಂಘ ಟನೆಗಳ ಪ್ರಮುಖರು,ರಾಜಕೀಯ ಧುರೀಣರು ಶಿಕ್ಷಕರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ತಕ್ಷಣವೇ ಬಿಇಓ ಹರನಾಳ,ಗೋಲಗೇರಿ ವಲಯ ಶಿಕ್ಷಣ ಇಲಾಖೆ ಸಿ.ಆರ್.ಸಿ ಜಿಎನ್.ಪಾಟೀಲ, ಸಾಸಾಬಾಳ ಶಾಲೆಯ ಜಿಪಿಟಿ ಸಹಶಿಕ್ಷಕ ಬಿ.ಎಂ. ತಳವಾರ, ಮಾಡಬಾಳ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಎಸ್.ಎಲ್.ಭಜಂತ್ರಿ ಹಾಗೂ ಸಾಸಾಬಾಳ ಗ್ರಾಮದ ಸಂಗಮೇಶ ಚಿಂಚೋಳಿ ಅವರನ್ನು ಬಂಧಿಸಬೇಕು.
ಇಲ್ಲದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಕಂಡು ಬಂದಿತು ಶಿಕ್ಷಕನ ಪತ್ನಿಯಾದಿಯಾಗಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.ಇಂಡಿ ವಿಭಾಗದ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಸ್ಥಳಕ್ಕೆ ಧಾವಿಸಿ ಶೀಘ್ರ ದಲ್ಲಿಯೇ ಎಲ್ಲ ಆರೋಪಿಗಳನ್ನು ಬಂಧಿಸುವು ದಾಗಿ ಭರವಸೆ ನೀಡಿದರು ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿತು. ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ದೇವರಹಿಪ್ಪರಗಿ ತಾಲ್ಲೂಕು ಕೋರವಾರ ಗ್ರಾಮದಲ್ಲಿ ಮುಖ್ಯಶಿಕ್ಷಕ ಬಸವರಾಜ ನಾಯಕಲ್ ಅವರ ಅಂತ್ಯಕ್ರಿಯೆ ನಡೆಯಿತು.
ಸುದ್ದಿ ಸಂತೆ ನ್ಯೂಸ್ ಸಿಂದಗಿ…..