ಬೆಂಗಳೂರು –
ದಿನ ಬೆಳಗಾದರೆ ಸಾಕು ರಾಜ್ಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಒಂದೊಂದು ಹಗರಣಗಳು ಹೊರಗೆ ಬರುತ್ತಿರುವ ನಡುವೆ ಮತ್ತೊಂದು ದೊಡ್ಡ ಪ್ರಮಾಣದ ಹಗರಣ ವೊಂದು ಬೆಳಕಿಗೆ ಬಂದಿದೆ ಹೌದು ಜಲಸಂಪ ನ್ಮೂಲ ಇಲಾಖೆಯ 182 ಹುದ್ದೆಗಳ ನೇಮಕಾತಿ ಯಲ್ಲಿ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಹುದ್ದೆ ಗಿಟ್ಟಿಸಲು ಯತ್ನಿಸಿರು ವುದನ್ನು ಸಿಸಿಬಿ ಪೊಲೀಸರು ಬಯಲಿಗೆಳೆ ದಿದ್ದಾರೆ
ಅವ್ಯವಹಾರ ಸಂಬಂಧ ಮೂವರು ಸರ್ಕಾರಿ ನೌಕರರು, 37 ಅಭ್ಯರ್ಥಿಗಳು ಹಾಗೂ 8 ಮಧ್ಯ ವರ್ತಿಗಳು ಸೇರಿ 48 ಮಂದಿಯನ್ನು ಬಂಧಿಸಲಾ ಗಿದೆ.ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನಕಲಿ ದಾಖಲಾತಿ ಸಲ್ಲಿಸಿ ನೌಕರಿ ಗಿಟ್ಟಿಸಿ ಕೊಳ್ಳಲು ಹಲವರು ಯತ್ನಿಸಿ ದ್ದರು.2022ರ ಅಕ್ಟೋಬರ್ನಲ್ಲಿ ಜಲಸಂಪನ್ಮೂಲ ಇಲಾಖೆ ಯಿಂದ 182 ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ದ್ವಿತೀಯ ಪಿಯುಸಿ, ಸಿಬಿಎಸ್ಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗು ತ್ತಿತ್ತು. ಯಾವುದೇ ಲಿಖಿತ ಪರೀಕ್ಷೆ ಇರಲಿಲ್ಲ.ನಕಲಿ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಹುದ್ದೆ ಪಡೆದುಕೊಳ್ಳಲು ಬಂಧಿತರು ಪ್ರಯತ್ನಿಸಿದ್ದರೆಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.
ಸಧ್ಯ ಈ ಒಂದು ವಿಚಾರ ದಲ್ಲಿ ಎಲ್ಲರನ್ನೂ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆ ಯನ್ನು ಮಾಡತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..