ಮೈಸೂರು –
ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ನ್ನು ಅಕ್ರಮ ವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮೈಸೂರಿನಲ್ಲಿ ಬಂಧನ ಮಾಡಲಾಗಿದೆ. ಆರೋಪಿ ಯನ್ನು ವಶಕ್ಕೆ ಪಡೆದಿದ್ದಾರೆ ಸಿಸಿಬಿ ಪೊಲೀಸರು. ನಂಜನಗೂಡು ತಾಲೂಕು ಹೊಸಕೋಟೆ ಮಧುಕು ಮಾರ (37) ಬಂಧಿತ ಆರೋಪಿಯಾಗಿದ್ದಾನೆ.

ನಂಜನಗೂಡು ಸಮೀಪದ ಪೆಟ್ರೋಲ್ ಬಂಕ್ ಸಮೀಪ ದಾಖಲೆ ಇಲ್ಲದೆ ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ನ್ನು ಮಾರಾಟ ಮಾಡುವಾಗ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಯ ನ್ನು ವಶಕ್ಕೆ ತಗೆದುಕೊಂಡಿದ್ದಾರೆ.ಆರೋಪಿ ಮಧುಕು ಮಾರ್ ನಿಂದ ತುಂಬಿದ ಆಕ್ಸಿಜನ್ ಸಿಲಿಂಡರ್ ನ್ನು ವಶಕ್ಕೆ ತಗೆದುಕೊಂಡಿರುವ ವಿದ್ಯಾರಣ್ಯಪುರಂ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.