ಹುಬ್ಬಳ್ಳಿಯಲ್ಲಿ ಆನೆ ದಂತ ಚೋರರ ಬಂಧನ – CID ಅರಣ್ಯ ಘಟಕದ DYSP ಮುತ್ತಣ್ಣ ಸರವಗೋಳ ಟೀಮ್ ಕಾರ್ಯಾಚರಣೆ…..

Suddi Sante Desk
ಹುಬ್ಬಳ್ಳಿಯಲ್ಲಿ ಆನೆ ದಂತ ಚೋರರ ಬಂಧನ – CID ಅರಣ್ಯ ಘಟಕದ DYSP ಮುತ್ತಣ್ಣ ಸರವಗೋಳ ಟೀಮ್ ಕಾರ್ಯಾಚರಣೆ…..

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಸಿ.ಐ.ಡಿ ಪೊಲೀಸ್‌ ವಿಶೇಷ ಅರಣ್ಯ ಸಂಚಾರಿ ದಳವರು  ಕಾರ್ಯಾಚರಣೆ ಮಾಡಿ ಆನೆ ದಂತದಿಂದ ಮಾಡಿರುವ ಕಲಾಕೃತಿ ಗಳನ್ನು ವಶಕ್ಕೆ ಮತ್ತು ಆರೋಪಗಳನ್ನು ಬಂಧನ ಮಾಡಲಾಗಿದೆ.ಹೌದು

ಕೆ ವಿ ಶರತಚಂದ್ರ ಐ.ಪಿ.ಎಸ್ ಎಡಿಜಿಪಿ ಸಿ.ಐ.ಡಿ ಬೆಂಗಳೂರು ಮತ್ತು ಪ್ರಭಾರ ಡಿ.ಐ.ಜಿ.ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರುರವರು ಹಾಗೂ ಪೊಲೀಸ್ ಉಪಾಧೀಕ್ಷಕರು ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗರವರ ಮಾರ್ಗದರ್ಶನ ದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ.

ಹುಬ್ಬಳ್ಳಿ ಹೊಸ ಬಸ್ ಸ್ಟ್ಯಾಂಡ್ ಹತ್ತುತಿರದ ಪೊಲೀಸ್‌ ಅರಣ್ಯ ಸಂಚಾರಿ ದಳ ಹುಬ್ಬಳ್ಳಿರ ವರು ಕಾರ್ಯಚರಣೆ ನಡೆಸಿ ಆರೋಪಿತರಾದ ಕೊಲ್ಲಾಪೂರ, ವಿಜಯ್‌ ತಂದೆ ರಾಜಾರಾಂ ಕುಂಬಾರ ಸಾ: ಕೊಲ್ಲಾಪೂರ, ಸಾಗರ ತಂದೆ ಸುಭಾಷ ಪರಾಣಿಕ ಸಾ: ಕೊಲ್ಲಾಪೂರ ವಿನಾಯಕ ತಂದೆ ನಾಮದೇವ ಕಾಂಬ್ಳೆ ಸಾ: ನಿಪ್ಪಾಣಿ,ದಾನಜೀ ತಂದ ಪಾಂಡುರಂಗ ಪಾಟೀಲ ತಾ: ನಿಪ್ಪಾಣಿ ಎಂಬುವವರುಗಳು ಅಕ್ರಮವಾಗಿ ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿತರನ್ನು ಬಂಧಿಸಿ ಅವರ ವಶದಲ್ಲಿದ್ದ 384 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಅಲಂಕಾರಿಕ ಪಟ್ಟಿಗೆ 112 ಗ್ರಾಂ ತೂಕದ ಆನೆಯ ದಂಡದಿಂದ ತಯಾರಿಸಿದ ಕೆಂಪು ಹರಳು ಇರುವ ಒಂದು ಖಡ್ಗ 350 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಆಯತಾಕಾರದ ಪೆಟ್ಟಿಗೆ

279 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಮೊಟ್ಟೆಯಾಕಾರದ ಪೆಟ್ಟಿಗೆ ಆರೋಪಿತ ಸಾತ್ ತಂದೆ ಶಹಜಾನ ಜಮಾದಾರ ಇತನಿಗೆ ವಿಚಾರಿಸಲು ಇವುಗಳನ್ನು ತನ್ನ ತಂದೆ ಯವರಾದ ಶಹಜಾನ ಜಮಾದಾರ ರಾಜಸ್ಥಾನ ದಲ್ಲಿ ನಡೆಯುವ ಜಾತ್ರೆಗಳು ಸಂತೆಗಳು ಸಾಧು ಸಂತರ ಬಳಿಯಿಂದ ಅನೇಕ ವರ್ಷಗಳ ಹಿಂದೆ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರು.

ಅವುಗಳನ್ನು ಮಾರಾಟ ಮಾರಿದರೆ ಸಾಕಷ್ಟು ದುಡ್ಡು ಬರಬಹುದು ತಿಳಿದು ನಾವು ಇಲ್ಲಿಗೆ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿ ಕೊಂಡಿರುತ್ತಾರೆ. ಈ ಆರೋಪದ ಮೇಲೆ ಆರೋ ಪಿತರ ವಿರುದ್ಧ ಹುಬ್ಬಳ್ಳಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ರವರು WLOR No 01/2023 ಕಲಂ 9,39,40, 48 (A)49(B), 50,51,55 R/W ಶೆಡ್ಯೂಲ್ (1) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕೆ ವಿ ಶರತ್ ಚಂದ್ರ ಐ.ಪಿ.ಎಸ್ ಎಡಿಜಿಪಿ ಸಿ.ಐ.ಡಿ ಬೆಂಗಳೂರು ಮತ್ತು ಪ್ರಭಾರ ಡಿ.ಐ.ಜಿ.ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರುರವರು ಹಾಗೂ ಪೊಲೀಸ್‌ ಉಪಾಧೀಕ್ಷಕರು ಮುತ್ತಣ್ಷಾ ಸರವಗೋಳ.ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗರವರ ಮಾರ್ಗದರ್ಶ ನದಲ್ಲಿ ಪೊಲೀಸ್‌ ಸಬ್‌ ಇನ್ಸ್ಪೆಕರ್ ಆದ ಪ್ರಸಾದ ಪಣೇಕ‌ರ ಹಾಗೂ ಸಿಬ್ಬಂದಿ ಜನರಾದ ಎಲ್.ಎ ಪಾಠಕ,ಅಶೋಕ ನಾಗರಹಳ್ಳಿ ರವೀಂದ್ರ ಗೋಣೆ ನವರ, ಎಸ್.ಎಚ್‌ ಹುಲಗೇರಿ ಹಾಗೂ ದಿವ್ಯಾ ಎಸ್ ನಾಯ್ಕ,ವಿನಾಯಕ ಕೋಟಿ,ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿ ದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.