ರಾಯಚೂರು –
ಸರ್ಕಾರಿ ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿಯ ಅಕ್ರಮ ಸಾಗಾಟ ಪ್ರಕರಣವೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.ಹೌದು ಟ್ರಕ್ ನಲ್ಲಿ 253 ಮೂಟೆ ಹಾಲಿನ ಪೌಡರ್ ಅನ್ನು ಸಾಗಿಸಲಾಗುತ್ತಿತು.ಕಂಟ್ರೋಲ್ ರೂಂಗೆ ಬಂದಿರುವ ದೂರಿನ ಆಧಾರದ ಮೇಲೆ ರಾಯಚೂರು ಪಶ್ಚಿಮ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ದ್ದಾರೆ.ಸರ್ಕಾರಿ ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಎಂದು 112 ಕಂಟ್ರೋಲ್ ರೂಂಗೆ ಎಮರ್ಜೆನ್ಸಿ ಕರೆ ಬಂದಿತ್ತು.ಈ ಕರೆಯ ಆಧಾರದ ಮೇಲೆ ರಾಯಚೂರು ಪಶ್ಚಿಮ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ರಾಯಚೂ ರಿನ ಯರಮರಸ್ ನ ನಂದಿನಿ ಕೇಂದ್ರದಿಂದ ಈ ಲೋಡ್ ಬಂದಿದೆ ಎನ್ನಲಾಗಿದೆ
ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ತಲುಪ ಬೇಕಿದ್ದ ಹಾಲಿನ ಪುಡಿಯನ್ನು ಸಾಗಿಸುತ್ತಿದ್ದ ಟ್ರಕ್ ಶಾಲೆಗ ಳಿಗೆ ಹಾಲಿನ ಪುಡಿ ಡೆಲಿವರಿ ಮಾಡದೇ ರಾಯಚೂರು ನಗರದಲ್ಲೇ ಓಡಾಡುತ್ತಿತ್ತು ಇದನ್ನೂ ಗಮನಿಸಿದ ಸಾರ್ವಜ ನಿಕರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಕಾರ್ಯಪ್ರವೃತರಾದ ಅಧಿಕಾರಿಗಳು ಹಾಲಿನಪುಡಿ ಮೂಟೆಗಳ ಸಮೇತ ಟ್ರಕ್ ಅನ್ನು ವಶಪಡಿಸಿ ಕೊಂಡಿದ್ದಾರೆ.ಟ್ರಕ್ ಚಾಲಕನನ್ನು ಪಶ್ಚಿಮ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.