ಬೆಂಗಳೂರು –
545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ಬಗೆದಷ್ಟೂ ಆಳ ಹೋಗುತ್ತಿದ್ದು.ಈಗಾಗಲೇ 38ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು ಇದೀಗ ಮಾಗಡಿಯ ದರ್ಶನ್ ಗೌಡನ ಬಂಧನದ ಬೆನ್ನಲ್ಲೇ ಮತ್ತಿಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಬಂಧನವನ್ನು ಮಾಡಲಾ ಗಿದೆ.ಹೌದು ಇಬ್ಬರೂ ಪೊಲೀಸ್ ಪೇದೆಗಳು,ಪಿಎಸ್ಐ ಆಗಿ ಆಯ್ಕೆಯಾಗಿದ್ದರು.ನೆಲಮಂಗಲ ಪೊಲೀಸ್ ಠಾಣೆ ಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಮತ್ತು ಬೆಂಗಳೂರಿನ ಕಲಾಸಿಪಾಳ್ಯ ಠಾಣೆಯ ಪೇದೆ ಹರೀಶ್ ವಿರುದ್ಧ ಎಫ್ಐಆರ್ ದಾಖಲಾ ಗಿದೆ.ಮೋಹನ್ ಕುಮಾರ್ ಕೂಡ ಪಿಎಸ್ಐ ಪರೀಕ್ಷೆಯಲ್ಲಿ ಪಾಸ್ ಆಗಿದ್ದ ಅನುಮಾನ ಬಂದು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದಾಗ ಮೋಹನ್ ನೀಡಿದ್ದ ಕಾರ್ಬನ್ ಶೀಟ್ ಮತ್ತು ಒರಿಜಿನಲ್ ಕಾಪಿಗೂ ವ್ಯತ್ಯಾಸ ಕಂಡು ಬಂದಿತ್ತು. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೋಹನ್ ಕುಮಾರ್ ನನ್ನು ಬಂಧಿಸಿದ ಸಿಐಡಿ ಅಧಿಕಾರಿ ಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹರೀಶ್ ಪಿಎಸ್ಐ ಹುದ್ದೆಗಾಗಿ ಹರೀಶ್ 50 ಲಕ್ಷ ರೂ.ಗೆ ಇಬ್ಬರು ವ್ಯಕ್ತಿಗಳ ಮೂಲಕ ಡೀಲ್ ಮಾಡಿಕೊಂಡಿದ್ದ. ಈ ಪೈಕಿ 30 ಲಕ್ಷ ಹಣ ನೀಡಿ ಒಎಂಆರ್ ಶೀಟ್ ತಿದ್ದಲು ಹಣ ನೀಡಿದ್ದ. ಎಕ್ಸಾಂ ವೇಳೆ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಟ್ಟು ಬಂದಿದ್ದ. ಅನುಮಾನದ ಮೇಲೆ ಸಿಐಡಿ ಅಧಿಕಾರಿಗಳು ಹರೀಶ್ನನ್ನ ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಈತನ್ನು ಬಂಧಿಸಿದ್ದಾರೆ. ಹರೀಶ್ ಸಂಪರ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ತನಿಖೆ ಮುಂದುವರಿದಿದೆ.