ಮೈಸೂರು –
ಡಿ ಬಾಸ್ ತೋಟಕ್ಕೆ ಬಂದಿತು ಗಣಪತಿ ಸಚ್ಚಿದಾನಂ ದ ಆಶ್ರಮದ ಗಿಳಿ.ಪ್ರಾಣಿಪಕ್ಷಿಗಳ ಪ್ರೀತಿಗೆ ಹೆಸುರು ವಾಸಿಯಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶ ನ್ ತಾವು ಸಾಕುತ್ತಿರುವ ಪಕ್ಷಿಗಳ ಲೀಸ್ಟ್ ಗೆ ಹೊಸ ಸದಸ್ಯನನ್ನು ಸೇರಿಸಿಕೊಂಡಿದ್ದಾರೆ.

ನಿನ್ನೆ ಸೋಮವಾರ ದಂದು ನಟ ದರ್ಶನ್ ಮೈಸೂ ರಿನ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಗಣಪತಿ ಸಚ್ಚಿದಾನಂ ದ ಶ್ರೀ ಗಳ ಬಳಿ ಆಶೀರ್ವಾದ ಪಡೆದುಕೊಂಡ ನಂತ ರ ಆಶ್ರಮದ ಆವರಣದಲ್ಲಿದ್ದ “ಶುಕವನ”ಕ್ಕೆ ಭೇಟಿ ನೀಡಿ ಅಲ್ಲಿದ್ದ ಪಕ್ಷಿಗಳನ್ನು ವೀಕ್ಷಿಸಿದ್ದಾರೆ

ಈ ವೇಳೆ ಅಲ್ಲಿದ್ದ ರೆಡ್ ಹೆಡೆಡ್ ಅಮೇಜಾ಼ನ್ ಎಂಬ ಜಾತಿಗೆ ಸೇರಿದ ಗಿಳಿಯೊಂದನ್ನು ಇಷ್ಟಪಟ್ಟು, ಶ್ರೀಗಳ ಬಳಿ ಆ ಪಕ್ಷಿಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ.
ಇದಕ್ಕೊಪ್ಪಿದ ಶ್ರೀಗಳು ನಟ ದರ್ಶನ್ ಗೆ ಪಕ್ಷಿಯನ್ನು ಹಸ್ತಾಂತರಿಸಿದ್ದಾರೆ. ಈ ಮೂಲಕ ಡಿ ಬಾಸ್ ಅವರ ತಂಡಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾದಂತಾ ಗಿದೆ.
 
			

 
		 
			


















