ಬೆಂಗಳೂರು –
ಮಗಳ ದಿನಾಚರಣೆ ದಿನದಂದು ಸುದ್ದಿ ಸಂತೆ ಯಲ್ಲೊಂದು ವಿಶೇಷ ಲೇಖನ ಹೌದು ಮಗಳು ಜನಿಸಿದರೆ ಕುಗ್ಗಬೇಡಿ ಹೆಮ್ಮೆಯಿಂದ ಹಿಗ್ಗಿ ಏಕೆ ಗೊತ್ತಾ ಪ್ರತಿಯೊಬ್ಬ ಮಹಿಳೆ ಮೊದಳು ಮಗಳಾ ಗಿರುತ್ತಾಳೆ ಹೀಗಾಗಿ ಮೊದಲು ದೇಶದ ಎಲ್ಲಾ ಹೆಣ್ಮಕ್ಕಳಿಗೆ ಮಗಳ ದಿನದ ಶುಭಾಶಯಗಳು.
ಒಂದು ಹೆಣ್ಣು ಮೊದಲು ನಿರ್ವಹಿಸುವ ಪಾತ್ರವೇ ಮಗಳು ಕೆಲವರು ತಮಗೆ ಹೆಣ್ಮಕ್ಕಳು ಜನಿಸಿ ದಾಗ ಲಕ್ಷ್ಮಿಯೇ ಮನೆಗೆ ಬಂದಳು ಎಂದು ಸಂತೋಷ ದಿಂದ ಸಂಭ್ರಮ ದಿಂದ ಮನೆಗೆ ಬರ ಮಾಡಿಕೊಂಡು ಅವಳನ್ನು ರಾಜಕುಮಾರಿ ಯಂತೆ ಸಾಕುತ್ತಾರೆ.
ಆದರೆ ಹೆಣ್ಮು ಮಗು ಜನಿಸಿದಾಗ ಆ ಮಗುವನ್ನು ಕಡೆಗಣಿಸುವವರು ಇನ್ನೂ ನಮ್ಮ ನಡುವೆ ಈಗಲೂ ಕೂಡಾ ಇದ್ದಾರೆ ಎಂದರೆ ಅದೊಂದು ದೊಡ್ಡ ದುರ್ದೈವದ ಅಮಾನವೀಯ ಸಂಗತಿ ಯಾಗಿದೆ.
ಹೆಣ್ಣು ಯಾವುದಕ್ಕೂ ಕಡಿಮೆಯಿಲ್ಲ, ಮಗಳಾ ದರೆ ಏನಂತೆ ಮಗನಂತೆ ಸಾಕಿ ಮಗಳಾಗಿ ಆರೈಕೆ ಮಾಡುತ್ತಾಳೆ, ಮಗನಾಗಿ ನಿಮ್ಮ ರಕ್ಷಣೆ ಮಾಡುತ್ತಾಳೆ ಹೀಗಾಗಿ ಇಂದಿನ ಬದಲಾವಣೆ ಯ ಸಮಾಜದ ನಡುವೆ ಮಗಳು ಪ್ರಮುಖ ವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಹೆಣ್ಣು ಮಕ್ಕಳ ಅವಶ್ಯಕತೆ ಬಗ್ಗೆ ಜಾಗ್ರತೆ ಮೂಡಿಸಲು ರಾಷ್ಟ್ರೀಯ ಮಗಳ ದಿನವನ್ನು ಆಚರಿಸುತ್ತೇವೆ.ಈಗಾಗಲೇ ನಮ್ಮ ದೇಶದಲ್ಲಿ ಹೆಣ್ಣು-ಗಂಡಿನ ಅನುಪಾತ ತೆಗೆದು ನೋಡಿದರೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆಯಾಗಿದೆ ಭ್ರೂಣದಲ್ಲಿರುವ ಮಗು ಹೆಣ್ಣು ಎಂದು ತಿಳಿದಾಗ ಎಷ್ಟೋ ಜನರು ಆ ಮಗು ಹಣ್ಣು ಬಿಡುವ ಮುನ್ನವೇ ಅದರ ಜೀವ ತೆಗೆದಿ ದ್ದಾರೆ.ಅದರ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದೆ.
ಬಹುತೇಕ ಪುರುಷರಿಗೆ ಮದುವೆಯಾಗಲು ಹೆಣ್ಮಕ್ಕಳೇ ಸಿಗ್ತಾ ಇಲ್ಲ. ಈಗ ಗರ್ಭದಲ್ಲಿರುವ ಲಿಂಗ ಪತ್ತೆ ಕಾನೂನು ಬಾಹಿರ.ಈ ಕಾರಣಕ್ಕೆ ಎಷ್ಟೋ ಹೆಣ್ಮಕ್ಕಳು ಜನಿಸಿದ ಮೇಲೆ ಹೆಣ್ಣೆಂದು ಕೊಲೆ ಮಾಡುವ ಪಾಪಿಗಳೂ ಇನ್ನೂ ಕೂಡಾ ಈಗಲ ಇದ್ದಾರೆ.
ಹೆಣ್ಣು ಮಗು ಪೋಷಕರ ಪಾಲಿಗೆ ಎಂಥ ಭಾಗ್ಯ ಶಾಲಿ ಎಂಬುವುದು ಹೆಣ್ಮಕ್ಕಳಿದ್ದವರಿಗಷ್ಟೇ ಇದು ಗೊತ್ತಿರುತ್ತದೆ. ಮನೆಯಲ್ಲಿ ಮಗ ನಮ್ಮ ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ ಎಂದು ಒಂದು ಕಾಲದಲ್ಲಿ ಪೋಷಕರು ಹೇಳುತ್ತಿದ್ದರು, ಆದರೆ ನಮ್ಮ ಮಗಳು ಎಂದಿಗೂ ನಮ್ಮನ್ನು ಬೀದಿಗೆ ಬಿಡಲ್ಲ ಎಂಬ ಭರವಸೆಯನ್ನು ಹೆಣ್ಮಕ್ಕಳು ಇಂದು ಮೂಡಿಸುತ್ತಿದ್ದಾರೆ.ಮಗಳ ಜನನವಾದರೆ ಸಂಭ್ರಮಿಸೋಣ ಎಂಬ ಮಾತುಗಳು ಈ ಒಂದು ಚಿತ್ರಣ ದಿಂದ ಇಂದು ಕಂಡು ಬರುತ್ತದೆ
ಭಾರತದಲ್ಲಿ ಮಗಳ ದಿನಾಚರಣೆಯನ್ನು 2007ರಿಂದ ಆಚರಿಸಲಾಗುವುದು.ಮಗಳು ಎಂಬ ಕಾರಣಕ್ಕೆ ಅವಳನ್ನು ನಿರ್ಲಕ್ಷ್ಯ ಮಾಡ ಬೇಡಿ ಎಂಬುವುದೇ ಈ ಆಚರಣೆಯ ಉದ್ದೇಶ ವಾಗಿದೆ.ಇದೀಗ ಕಾಲ ಬದಲಾಗುತ್ತಿರುವುದು ಸಂತೋಷದ ವಿಷಯ.
ಹೆಣ್ಣು-ಗಂಡು ಎಂದು ಬೇಧ ಮಾಡುವ ಪೋಷಕರ ಸಂಖ್ಯೆ ಕಡಿಮೆಯಾಗುತ್ತಿದೆ, ಮಗಳಾ ದರೂ ನಮ್ಮ ಪಾಲಿಗೆ ಅವಳೇ ಮಗ-ಮಗಳು ಎಂದು ಹೇಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ತುಂಬಾನೇ ಅದೃಷ್ಟವಂತರಿಗೆ ಮಾತ್ರ ಮಗಳು ಜನಿಸುತ್ತಾಳೆ ಎಂದು ಹೇಳುತ್ತಾರೆ.
ಕಾರಣ ಅವಳಷ್ಟು ತಂದೆ-ತಾಯಿಯ ಮೇಲೆ ಪ್ರಿತಿ ತೋರಿಸಲು ಖಂಡಿತ ಮಗನಿಂದ ಸಾಧ್ಯವಿಲ್ಲ. ಮಗಳು ಜನಿಸಿದರೆ ಕುಗ್ಗಬೇಡಿ ಹೆಮ್ಮೆಯಿಂದ ಹಿಗ್ಗಿ ಅವು ಖಂಡಿತ ನಿಮ್ಮನ್ನು ಕೈ ಬಿಡಲ್ಲ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..